ಜೊಯಿಡಾ: ರಾಜ್ಯದ ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಎಲ್ಲಾ ಗುಣಲಕ್ಷಣವಿದೆ. ನೆರೆಯ ಗೋವಾ ರಾಜ್ಯದಲ್ಲಿ 2003ರಲ್ಲಿ ಎಸ್‌ಟಿಗೆ ಸೇರಿಸಿದೆ. ಕಳೆದ ಎರಡು ದಶಕಗಳಿಂದ ಕುಣಬಿ ಸಮಾಜ ಮತ್ತು ಮಾಜಿ ಮಂತ್ರಿ, ಶಾಸಕ ಆರ್.ವಿ.ದೇಶಪಾಂಡೆಯವರು ರಾಜ್ಯ ಹಾಗೂ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸರಕಾರ ಕುಣಬಿಗಳನ್ನು ಎಸ್‌ಟಿಗೆ ಸೇರಿಸಲು ಕೂಡಲೇ ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಯುವ ಮುಖಂಡ ಪ್ರಸನ್ನ ಗಾವಡಾ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರಲ್ಲಿ ಸರಕಾರದ ಅಂದಿನ ಮಂತ್ರಿ ಆರ್.ವಿ.ದೇಶಪಾಂಡೆ ನೇತ್ರತ್ವದಲ್ಲಿ ಕುಣಬಿ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿಯಾದಾಗ ಕುಣಬಿಗಳ ಅಧ್ಯಯನಕ್ಕೆ ಮೈಸೂರು ವಿವಿ ಬುಡಕಟ್ಟು ಅಧ್ಯಯನ ವಿಭಾಗಕ್ಕೆ 5 ಲಕ್ಷ ಮಂಜೂರಿಯಾಗಿತ್ತು. ಮೈಸೂರು ವಿವಿ ಪ್ರೊ.ಗಂಗಾಧರ ಎಮ್.ಆರ್. ಕುಣಬಿಗಳ ಸಹಕಾರದಿಂದ ವರದಿ ಸಿದ್ಧಪಡಿಸಿ ಸರಕಾರಕ್ಕೆ ನೀಡಲಾಗಿತ್ತು. 10-10-2017ರಲ್ಲಿ ಮಂತ್ರಿ ಆರ್.ಡಿ.ದೇಶಪಾಂಡೆ ಯವರ ಪ್ರಯತ್ನದಿಂದ ಸರಕಾರ ವರದಿ ಅಂಗಿಕರಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ರಜಿಸ್ಟಾರ್ ಜನರಲ್ ಆಪ್ ಇಂಡಿಯಾಗೆ ಕಳುಹಿಸಿದ ಖ್ಯಾತಿ ಅಂದಿನ ಕಾಂಗ್ರೇಸ್ ಸರಕಾರಕ್ಕೆ ಸಲ್ಲುತ್ತದೆ. ಆರ್.ವಿ.ಡಿಯವರೊನ್ನಳಗೊಂಡ ಕುಣಬಿ ನಿಯೋಗ ದೆಹಲಿಯಲ್ಲಿ ಎಸ್‌ಟಿ ಮಂತ್ರಿಯವರನ್ನು 2018ರಲ್ಲಿ ಭೇಟಿಯಾಗಿ ಅಗ್ರಹಿಸಲಾಗಿದೆ. ಫೆಬ್ರುವರಿ 2018ರಂದು ಕೇಂದ್ರ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಡಿಸೆಂಬರ್ 12-2021ರಂದು ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ರವರಿಗೆ ಪತ್ರ ಬರೆದಿದ್ದಾರೆ. ಇದಾದ ನಂತರ ಬೇರೆ ಬೇರೆ ಪಕ್ಷಗಳ ನಿಯೋಗ ದೆಹಲಿಗೆ ಹೋಗಿದ್ದಾರೆ ಎನ್ನುವ ಅರಿವು ನಮಗಿದೆ ಎಂದಿದ್ದಾರೆ.
ಕುಣಬಿಗಳು ಹಿಂದುಳಿದ ಜನಾಂಗದವರಾಗಿದ್ದು, ತಮ್ಮ ಪರಿಶಿಷ್ಟ ಪಂಗಡದ ಹೋರಾಟ ಮಾಡುತ್ತಿದ್ದಾರೆ. ಉಪವಾಸ ಸತ್ಯಾಗ್ರಹ, ಸೈಕಲ್ ಜಾಥಾ, ರಾಜ್ಯ ಮಟ್ಟದ ಕಾರ್ಯಾಗಾರ, ಜಿಲ್ಲಾ ಮಟ್ಟದ ಸಮ್ಮೇಳನ ಮಾಡಿದ್ದಾರೆ. ಗೋವಾದ ಕುಣಬಿ ಸಮಾಜದವರು ಹೋರಾಟದಲ್ಲಿ ಕೈಜೋಡಿಸಿದ್ದಾರೆ. ಬೆಂಬಲ ನೀಡಿದ ಬಗ್ಗೆ ಖುಷಿ ಇದೆ. ಮುಂದೆ ಎಲ್ಲರ ಸಹಕಾರದಿಂದ ಕುಣಬಿ ಎಸ್‌ಟಿ ಪಟ್ಟಿಗೆ ಸೇರ್ಪಡೆಯಾಗಲು ಕೇಂದ್ರ ಹಾಗೂ ರಾಜ್ಯದಲ್ಲಿರುವ ಸರಕಾರ ಆದಷ್ಟು ಬೇಗ ಕ್ರಮ ವಹಿಸಬೇಕು ಎಂದಿದ್ದಾರೆ.
ಈ ಸಂದರ್ಬದಲ್ಲಿ ಮುಖಂಡರಾದ ಸುಭಾಶ ವೆಳಿಪ, ಸುರೇಶ ಗಾವಡಾ, ದಿವ್ಯಾನಿ ಗಾವಡಾ, ಸುಭಾಂಗಿ ಗಾವಡಾ ಇದ್ದರು.