Slide
Slide
Slide
previous arrow
next arrow

ಕೆನರೇಶ್ ಅಕ್ವಾಕಲ್ಚರ್ ವಿರುದ್ಧ ಅಪಪ್ರಚಾರ ಮುಂದುವರಿಸಿದರೆ ಕಾನೂನು ಕ್ರಮ: ಗಜಾನನ

300x250 AD

ಕುಮಟಾ: ತಾಲೂಕಿನ ಹೊಲನಗದ್ದೆಯ ಕೆನರೇಶ್ ಅಕ್ವಾಕಲ್ಚರ್ ಸಂಸ್ಥೆಗೆ ಒಳಪಟ್ಟ ಜಾಗವನ್ನು ಸ್ಮಶಾನಕ್ಕೆ ಸೇರಿದ್ದು ಎಂದು ಕೆಲ ಹಿತಾಸಕ್ತಿಗಳು ಅಪಪ್ರಚಾರ ಮಾಡುತ್ತಿದ್ದು, ಮತ್ತೆ ಅಪಪ್ರಚಾರ ಮುಂದುವರೆಸಿದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೆನರೇಶ್ ಅಕ್ವಾಕಲ್ಚರ್ ಸಂಸ್ಥೆಯ ಮುಖ್ಯಸ್ಥ ಎಚ್.ಎಸ್.ಗಜಾನನ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಸ್ಥಳೀಯ ಮುಖಂಡರು ಆ ಭಾಗದ ಜನರಿಗೆ ತಪ್ಪು ತಿಳುವಳಿಗೆ ನೀಡುವ ಮೂಲಕ ಜನರನ್ನು ನಮ್ಮ ಸಂಸ್ಥೆಯ ವಿರುದ್ಧ ಎತ್ತಿಕಟ್ಟುವ ಕಾರ್ಯ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಅದಕ್ಕಾಗಿ ನಮ್ಮ ಸಂಸ್ಥೆಗೆ ಸಂಬಂಧಪಟ್ಟ ಜಾಗದ ಬಗ್ಗೆ ಸ್ಥಳೀಯರಿಗೆ ದಾಖಲೆ ಸಮೇತ ಮಾಹಿತಿ ನೀಡುತ್ತಿದ್ದೇವೆ. ಕೆನರೇಶ್ ಅಕ್ವಾಕಲ್ಚರ್ ಎಲ್‌ಎಲ್‌ಪಿ ಭಾರತದ ಪ್ರಪ್ರಥಮ ಸಮುದ್ರ ಮೀನು ಮರಿ ಉತ್ಪಾದಿಸುವ ಕೇಂದ್ರವಾಗಿದೆ. ಸಿಬಾ ತಾಂತ್ರಿಕ ಸಹಯೋಗದೊಂದಿಗೆ ಆರಂಭಿಸಲಾಗಿದೆ. ನಮ್ಮ ಸಂಸ್ಥೆಯ ಕಾರ್ಯಾಚರಿಸುತ್ತಿರುವ ಸ್ಥಳವು ಕೆಐಎಡಿಬಿ ಹ್ಯಾಚರಿಗೋಸ್ಕರ ಅಭಿವೃದ್ಧಿ ಪಡಿಸಿ 1995ರಲ್ಲಿ ಲೀಸ್ ಕಮ್ ಸೇಲ್ ಡೀಡ್ ಮೂಲಕ ಅಕ್ವಿನಪಾರ್ಕಗೆ ನೀಡಲಾಗಿತ್ತು. ಅದರಂತೆ ಅಕ್ವಿನ್ ಪಾರ್ಕನಲ್ಲಿ ಸಿಗಡಿ ಮೀನಿನ ಹ್ಯಾಚರಿ ಆರಂಭಿಸಿತ್ತು. ಸ್ಥಳೀಯ ಪಂಚಾಯತ್‌ನಿ0ದ ಪರವಾನಗಿ ಪಡೆದು ಕಟ್ಟಡ ,ವಸತಿ ಗೃಹವನ್ನು ಕೂಡ ನಿರ್ಮಿಸಿತ್ತು. ಆದರೆ ಕಾರಣಾಂತದಿOದ ಅಕ್ವಿನ್ ಪಾರ್ಕ ನಷ್ಟ ಹೊಂದಿದ ಕಾರಣಕ್ಕೆ ಈ ಸ್ವತ್ತನ್ನು ಕೆಐಎಡಿಬಿ ಪುನಃ ತನ್ನ ವಶಕ್ಕೆ 1999ರಲ್ಲಿ ಪಡೆಯಿತು. ಮಾರ್ಚ್ 2012ರಲ್ಲಿ ಕೆಲವರು ಈ ಸ್ಥಳವನ್ನು ಅತಿಕ್ರಮಿಸಿಕೊಂಡು ಅನಧಿಕೃತ ಗೋಡೆ ನಿರ್ಮಿಸಿ, ಸಮುದ್ರಕ್ಕೆ ಹೋಗುವ ದಾರಿಯನ್ನು ಬಂದ್ ಮಾಡಿದ್ದರು. ಆಗ ಈ ಸ್ವತ್ತು ಕೆಎಸ್ ಎಸ್ ಐಡಿಸಿ ತಾಬದಲ್ಲಿದ್ದು, ಅಂದಿನ ವ್ಯವಸ್ಥಾಪಕ ನಿರ್ದೇಶಕರು ಈ ಅತಿಕ್ರಮಣವನ್ನು ಖುಲ್ಲಾಪಡಿಸಿಕೊಡುವಂತೆ ಜಿಲ್ಲಾಧಿಕಾರಿ ಅವರನ್ನು ಮನವಿ ಮಾಡಿದ್ದರು. ಇದನ್ನು ಪರಿಶೀಲಿಸಿ ಜಿಲ್ಲಾಧಿಕಾರಿ ಈ ಅತಿಕ್ರಮಣವನ್ನು ಖುಲ್ಲಾ ಪಡಿಸುವಂತೆ ಆದೇಶ ಮಾಡಿದ್ದರು.

2020ರಲ್ಲಿ ಶುದ್ಧ ಕ್ರಯಪಾತ್ರದ ಮುಖಾಂತರ ನಾವು ಈ ಜಾಗವನ್ನು ಖರೀದಿಸಿ ಹ್ಯಾಚರಿಯನ್ನು ಮರು ಅಭಿವೃದ್ಧಿಪಡಿಸಿ 50ಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸಿದ್ದೇವೆ. ಅದರಲ್ಲಿ ಶೇ.80 ರಷ್ಟು ಉದ್ಯೋಗವನ್ನು ಸ್ಥಳೀಯರಿಗೆ ನೀಡಲಾಗಿದೆ. ಅಲ್ಲದೇ ಇತ್ತೀಚೆಗೆ ನಮ್ಮ ಜಾಗವನ್ನು ಸರ್ವೆ ಮಾಡಿಸಿ, ನಮ್ಮ ಗಡಿಯನ್ನು ಗುರುತು ಮಾಡಿಕೊಂಡಿದ್ದೇವೆ. ನಮ್ಮ ಗಡಿ ಪಶ್ಚಿಮ ಭಾಗದಲ್ಲಿ ಸಮುದ್ರವೇ ಗಡಿಯಾಗಿದೆ. ಕಾರ್ಯದ ನಿಮಿತ್ತ ನಮ್ಮ ಕೆಲಸಗಾರರು ರಾತ್ರಿ ವೇಳೆಯಲ್ಲೂ ಪೈಪ್ ರಿಪೇರಿ ಸೇರಿದಂತೆ ಇನ್ನಿತರೆ ಕಾರ್ಯಗಳಿಗೆ ಸಮುದ್ರಕ್ಕೆ ಹೋಗುತ್ತಿರುವುದರಿಂದ ನಮ್ಮ ಜಾಗವನ್ನು ಸ್ವಚ್ಛಗೊಳಿಸಿಕೊಂಡಿದ್ದೇವೆ. ಆದರೆ ಕಿತಾಪತಿ ಮನಸ್ಥಿತಿಯ ಕೆಲವರು ಅಲ್ಲಿನ ಸ್ಥಳೀಯರಿಗೆ ವಾಸ್ತವ ಸ್ಥಿತಿಯನ್ನು ಮರೆಮಾಚಿ ನಮ್ಮ ಸಂಸ್ಥೆಯ ಜಾಗದಲ್ಲಿ ಸ್ಮಶಾನ ಇದೆ. ಅದೇ ಸ್ಥಳದಲ್ಲೆ ಸ್ಮಶಾನ ಮಾಡಬೇಕೆಂದು ಜನರನ್ನು ಪ್ರಚೋದಿಸಿ, ಗುಂಪು ಕಟ್ಟಿಕೊಂಡು ಬಂದು ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ನಮ್ಮ ಸಂಸ್ಥೆಯಲ್ಲಿ ದಿನದ 24 ಗಂಟೆಗಳ ಕಾಲವೂ ಸಿಬ್ಬಂದಿಯು ಕೆಲಸ ಮಾಡುತ್ತಿದ್ದು, ಇವರು ನೀಡುವ ತೊಂದರೆಯಿAದ ನಮ್ಮ ಕಾರ್ಮಿಕರು ರಾತ್ರಿ ಸಮಯದಲ್ಲಿ ಕೆಲಸ ಮಾಡಲು ಭಯಪಡುವಂತಹ ದುಃಸ್ಥಿತಿ ನಿರ್ಮಾಣವಾಗಿದೆ. ನಮ್ಮ ಜಾಗದಲ್ಲಿ ಅಧಿಕೃತ ಸ್ಮಶಾನ ಇಲ್ಲ. ಅಲ್ಲದೇ ಗ್ರಾಪಂಗೆ ಸಂಬAಧಪಟ್ಟ ಮೂರು ಅಧಿಕೃತ ಸ್ಮಶಾನ ಇರುವಾಗ ನಮ್ಮ ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ತೊಂದರೆ ನೀಡುತ್ತಿದ್ದಾರೆ. ಅಲ್ಲದೇ ಸರ್ಕಾರದ ಆದೇಶದ ಪ್ರಕಾರ ಸಮುದ್ರ ತೀರ ಪ್ರದೇಶದಲ್ಲಿ ಸ್ಮಶಾನ ನಿರ್ಮಿಸಬಾರದೆಂಬ ನಿಯಮ ಕೂಡ ಇದೆ.

300x250 AD

ಈ ಸಂಬAಧ ಈಗಾಗಲೇ ಸಹಾಯಕ ಆಯುಕ್ತರು, ತಹಸೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಪರಿಶೀಲಿಸಿ, ನಮ್ಮ ಸಂಸ್ಥೆಯ ಜಾಗದಲ್ಲಿ ಯಾವುದೇ ಸ್ಮಶಾನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಈ ಹೋರಾಟದ ಹೆಸರಿನಲ್ಲಿ ನಮಗೆ ತೊಂದರೆ ನೀಡುವ ವ್ಯಕ್ತಿಗಳನ್ನು ಕರೆದು, ಸ್ಮಶಾನದ ವಿಷಯದ ಬಗ್ಗೆಯೂ ಸ್ಪಷ್ಟಪಡಿಸಿದ್ದಾರೆ. ಆದರೂ ಕೆಲವರು ಸಂಸ್ಥೆಯ ವಿರುದ್ಧ ಅಪಪ್ರಚಾರ ಮಾಡುತ್ತಿರುವುದರಿಂದ ಸಾರ್ವಜನಿಕರಿಗೆ ವಾಸ್ತವಾಂಶ ತಿಳಿಸಲು ನಮ್ಮ ಸಂಸ್ಥೆಯ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದೇವೆ. ಸ್ಥಳೀಯರು ಸಹಕಾರ ನೀಡಬೇಕು. ಊರಿನ ಅಭಿವೃದ್ಧಿಗೆ ನಮ್ಮ ಸಂಸ್ಥೆಯಿAದ ಕೈಲಾದ ನೆರವು ನೀಡಲು ಸಿದ್ಧವಿದ್ದೇವೆ. ಸರ್ಕಾರಿ ಸ್ಮಶಾನವಿದ್ದರೆ ಅದರ ಅಭಿವೃದ್ಧಿಗೂ ನಾವು ಕೈಜೋಡಿಸುತ್ತೇವೆ. ಹಾಗಾಗಿ ಸ್ಥಳೀಯರು ಕೆಲ ಹಿತಾಸಕ್ತಿಗಳ ತಪ್ಪು ಮಾಹಿತಿಗಳಿಗೆ ಪ್ರಭಾವಿತರಾಗದೇ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿರುವ ಸಂಸ್ಥೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಅಲ್ಲದೇ ನಮ್ಮ ಸಂಸ್ಥೆಯ ವಿರುದ್ಧ ಮುಂದಿನ ದಿನಗಳಲ್ಲಿ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೆನರೇಶ್ ಅಕ್ವಾಕಲ್ಚರ್ ಸಿಇಒ ಕಾರ್ತಿಕ ಗೌಡ ಇದ್ದರು.

Share This
300x250 AD
300x250 AD
300x250 AD
Back to top