Slide
Slide
Slide
previous arrow
next arrow

ಹೊನ್ನಾವರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕರುನಾಡ ವಿಜಯಸೇನೆ ಮನವಿ

300x250 AD

ಹೊನ್ನಾವರ: ಪಟ್ಟಣಕ್ಕೆ ಒಂದು ಸುಸಜ್ಜಿತ ಕ್ರೀಡಾಂಗಣ ಮಂಜೂರಿ ಮಾಡುವಂತೆ ಒತ್ತಾಯಿಸಿ ಕರುನಾಡ ವಿಜಯಸೇನೆಯ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲೆಯ ಪ್ರಮುಖ ತಾಲೂಕಾದ ಹೊನ್ನಾವರವು ಈ ಹಿಂದೆ ಕೇಂದ್ರ ಸ್ಥಾನವಾಗಿತ್ತು. ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಗಳು, ಖಾಸಗಿ ಹಾಗೂ ಸರ್ಕಾರಿ ವಲಯದಲ್ಲಿ ಸ್ಥಾಪಿತವಾಗಿದೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಸಲ್ಲಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಕ್ರೀಡಾಳುಗಳಿಗೆ ಅವಶ್ಯವಿರುವ ಒಂದು ಸುಸಜ್ಜಿತ ಕ್ರೀಡಾಂಗಣ ಆಗದಿರುವುದು ದುರಂತ. ಕ್ರೀಡಾಕೂಟಗಳನ್ನು ನಡೆಸಲು ಖಾಸಗಿ ಸಂಸ್ಥೆಗಳ ಮೈದಾನವನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

300x250 AD

ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ, ತಾಲೂಕಾಧ್ಯಕ್ಷ ನಿತಿನ ಆಚಾರ್ಯ, ಉಪಾಧ್ಯಕ್ಷ ಸೂರಜ್ ಪಾಲೇಕರ್, ಸಾಮಾಜಿಕ ಜಾಲತಾಣದ ಶ್ರೀನಿವಾಸ ನಾಯ್ಕ, ಸಂಚಾಲಕ ರಾಜಶೇಖರ್ ಶೇಟ್, ಮಿಥುನ ಮೇಸ್ತ, ಈಶ್ವರ ವಾಳ್ಕೆ ಈ ವೇಳೆ ಇದ್ದರು.

Share This
300x250 AD
300x250 AD
300x250 AD
Back to top