• Slide
    Slide
    Slide
    previous arrow
    next arrow
  • ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಕಟ್ಟಿಬದ್ಧರಾಗಿ: ಶರತ್‌ಕುಮಾರ್ ನಾಯ್ಕ್

    300x250 AD

    ಕುಮಟಾ: ಹಲವಾರು ಜಿಹಾದ್‌ಗಳ ಮೂಲಕ ಭಾರತವನ್ನು ಇಸ್ಲಾಮಿಕರಣ ಮಾಡುತ್ತಿದ್ದಾರೆ. ಹೀಗಾಗಿ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಕಟ್ಟಿಬದ್ಧರಾಗೋಣ ಎಂದು ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಶರತ್‌ಕುಮಾರ್ ನಾಯ್ಕ್ ಕರೆ ನೀಡಿದರು.

    ತಾಲೂಕಿನ ದುಂಡಕುಳಿಯಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ವಕ್ತಾರರಾಗಿ ಮಾತನಾಡಿದ ಅವರು, ಹಿಂದುಗಳು ಧರ್ಮ ಶಿಕ್ಷಣದ ಅಭಾವದಿಂದಾಗಿ ಆತ್ಮಬಲವನ್ನು ವೃದ್ಧಿ ಮಾಡುವಲ್ಲಿ ವಂಚಿತರಾಗುತ್ತಿದ್ದಾರೆ. ಆ ಮೂಲಕ ವೈಯಕ್ತಿಕ ಜೀವನದಲ್ಲಿ ಮತ್ತು ರಾಷ್ಟ್ರೀಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಪರಿಹಾರೋಪಾಯವಾಗಿ ಪ್ರತಿಯೊಬ್ಬ ಹಿಂದೂಗಳು ಧಾರ್ಮಿಕ ಶಿಕ್ಷಣ ಪಡೆದುಕೊಂಡು ಯೋಗ್ಯ ಧರ್ಮಚರಣೆಯನ್ನು ಮಾಡಬೇಕು ಎಂದಿದ್ದಾರೆ.

    ಬಿಜೆಪಿ ತಾಲೂಕು ಮಂಡಳ ಅಧ್ಯಕ್ಷ ಹೇಮಂತಕುಮಾರ್ ಗಾಂವಕರ್ ಮಾತನಾಡಿ, ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿತು ಅದರಂತೆಯೇ ಆಚರಣೆ ಮಾಡುವುದು ತುಂಬಾ ಮಹತ್ವದ್ದಿದೆ. ನಾವೆಲ್ಲಾ ಹಿಂದುಗಳು ಜಾಗೃತರಾಗಿ ಹಿಂದೂರಾಷ್ಟ್ರಕ್ಕಾಗಿ ಪ್ರಯತ್ನ ಮಾಡಬೇಕಿದೆ ಎಂದರು.

    300x250 AD

    ಕಾರ್ಯಕ್ರಮದ ಸೂತ್ರಸಂಚಲನೆಯನ್ನು ಸುನಿತಾ ಅಳ್ಳಿಕಟ್ಟೆ ನಡೆಸಿಕೊಟ್ಟರು.

    Share This
    300x250 AD
    300x250 AD
    300x250 AD
    Leaderboard Ad
    Back to top