• first
  Slide
  Slide
  previous arrow
  next arrow
 • ಡಿ.16 ರಿಂದ ಸಾಲ್ಕೋಡ್-ಹೊಸಾಕುಳಿ ನುಡಿಹಬ್ಬ

  300x250 AD

  ಹೊನ್ನಾವರ: ತಾಲೂಕಿನ ಅರೇಅಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಡಿ.೧೬ರಂದು ಸಂಜೆ ೬ ಗಂಟೆಯಿಂದ ಸಾಲ್ಕೋಡ್ ಹಾಗೂ ಹೊಸಾಕುಳಿ ಗ್ರಾಮದ ವತಿಯಿಂದ ನುಡಿಹಬ್ಬ ಕಾರ್ಯಕ್ರಮ ನಡೆಯಲಿದೆ.

  ಗೀತಗಾಯನ, ನೃತ್ಯ, ಸನ್ಮಾನ, ನಾಟಕ ಒಳಗೊಂಡಿರುವ ನುಡಿಹಬ್ಬ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಲಿದ್ದು, ಶಾಸಕ ಸುನೀಲ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ವೇ. ಸುಬ್ರಹ್ಮಣ್ಯ ಭಟ್ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಶಾಸಕ ಶಾರದಾ ಶೆಟ್ಟಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ, ಕಾಂಗ್ರೇಸ್ ಮುಖಂಡರಾದ ಶಿವಾನಂದ ಹೆಗಡೆ, ಮಂಜುನಾಥ ನಾಯ್ಕ, ಭಾಸ್ಕರ ಪಟಗಾರ, ರತ್ನಾಕರ ನಾಯ್ಕ, ಕೃಷ್ಣ ಗೌಡ, ಅಯ್ಯಪ್ಪ ನಾಯ್ಕ, ಬಿಜೆಪಿ ಮುಖಂಡರಾದ ನಾಗರಾಜ ನಾಯಕ ತೊರ್ಕೆ, ಜಿ.ಜಿ.ಶಂಕರ್, ಗ್ರಾ.ಪಂ.ಅಧ್ಯಕ್ಷೆ ರಜನಿ ನಾಯ್ಕ, ಸುರೇಖಾ ನಾಯ್ಕ, ಉದ್ದಿಮೆದಾರರಾದ ಸುರೇಶ ಶೆಟ್ಟಿ, ಎಸ್.ಕೆ.ನಾಯ್ಕ, ಡಾ.ಸಂತೋಷ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ. ಪ್ರೊ.ಎಂ.ಜಿ.ಭಟ್ ಕನ್ನಡ ನಾಡು ನುಡಿಯ ಕುರಿತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.

  300x250 AD

  ಸಭಾ ಕಾರ್ಯಕ್ರಮದ ನಂತರ ಎಂ.ಎನ್.ನಾಯ್ಕ ನಿಲ್ಕೋಡ್ ಇವರ ನಿರ್ದೇಶನದ ಮಾರುತಿ ಬಾಡಕರ್ ವಿರವಿತ ‘ಗುಲಾಮ ಗಂಡ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.

  Share This
  300x250 AD
  300x250 AD
  300x250 AD
  Back to top