• first
  Slide
  Slide
  previous arrow
  next arrow
 • ದಾಂಡೇಲಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಇನ್ನೂ ನಿಗೂಢ!

  300x250 AD

  ದಾಂಡೇಲಿ: ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರ ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ. ಹಳಿಯಾಳ ಬ್ಲಾಕ್‌ಗೆ ನೂತನ ಅಧ್ಯಕ್ಷರ ಆಯ್ಕೆಯಾದಂತೆ ಇಲ್ಲಿಯೂ ಬುಧವಾರದ ಸಭೆಯಲ್ಲಿ ಅಧ್ಯಕ್ಷರ ಆಯ್ಕೆಯಾಗಬಹುದೆನ್ನುವ ಕಾಂಗ್ರೆಸ್‌ಗರ ನಿರೀಕ್ಷೆ ಹುಸಿಯಾಯಿತು.

  ಸೈಯದ್ ತಂಗಳ್ ಅವರು ನಿಧನರಾದ ನಂತರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಆರ್.ಹೆಗಡೆಯವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಆದರೆ, ಬುಧವಾರ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಡಿ ನಗರದ ಪಕ್ಷದ ಕಚೇರಿಯಲ್ಲಿ ಶಾಸಕ ಆರ್.ವಿ.ದೇಶಪಾಂಡೆಯವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬಿ.ಎಲ್.ಎ ಹಾಗೂ ಬೂತ್ ಸಮಿತಿಯ ಕಾರ್ಯಕರ್ತರ ಸಭೆಯಲ್ಲಿ ಅಧಿಕೃತವಾಗಿ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂಬ ನಂಬಿಕೆ ಕಾಂಗ್ರೆಸ್ ವಲಯದಲ್ಲಿತ್ತು. ಅಧ್ಯಕ್ಷ ಪದವಿಗಾಗಿ ತೆರೆಮರೆಯ ಪ್ರಯತ್ನವೂ ಸಾಗಿತ್ತು. ಏನೇ ಪ್ರಯತ್ನಗಳು ನಡೆದರೂ, ರಾಜಕೀಯದಲ್ಲಿ ಗುಣಿಲೆ, ಭಾಗಿಲೆ ಲೆಕ್ಕಚಾರದಲ್ಲಿ ಪರ್ಫೆಕ್ಟ್ ಎಂದೆ ಜನಜನಿತರಾದ ದೇಶಪಾಂಡೆಯವರು ಎಲ್ಲವನ್ನು ಅಳೆದು ತೂಗಿ ನಿರ್ಧಾರಕ್ಕೆ ಬರಲಿದ್ದಾರೆ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ.

  300x250 AD

  ಸಭೆ ಆರಂಭವಾಗುತ್ತಿದ್ದಂತೆಯೇ ಪಕ್ಷದ ವಿವಿಧ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆ, ಪಕ್ಷ ಸಂಘಟನೆಯ ಬಗ್ಗೆ ದೇಶಪಾಂಡೆಯವರು ಮಾರ್ಗದರ್ಶನ ಮಾಡಿದರು. ಆದರೆ ಎಲ್ಲಿಯೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಬಗ್ಗೆ ಸುಳಿವು ಬಿಟ್ಟು ಕೊಡದೇ ಇನ್ನೂ ಕೆಲ ದಿನಗಳವರೆಗೆ ಕಾಂಗ್ರೆಸಿಗರ ಕುತೂಹಲಕ್ಕೆ ಕಾರಣರಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬರತೊಡಗಿದೆ. ಬಲ್ಲಮೂಲಗಳ ಮಾಹಿತಿಯ ಪ್ರಕಾರ ಪ್ರಭಾರಿ ಅಧ್ಯಕ್ಷರಾದ ವಿ.ಆರ್.ಹೆಗಡೆಯವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬಹುದು. ಇಲ್ಲವೇ ಹೊಸಬರನ್ನು ಆಯ್ಕೆ ಮಾಡುವುದಾದರೆ ನಗರಸಭಾ ಸದಸ್ಯರಾದ ಮೋಹನ ಹಲವಾಯಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಪೂಜಾರ್, ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಕರ‍್ಯದರ್ಶಿ ದಾದಾಪೀರ್ ನದೀಮುಲ್ಲಾ, ಪಕ್ಷದ ಜಿಲ್ಲಾ ವಕ್ತಾರ ಆರ್.ಪಿನಾಯ್ಕ, ಉದ್ಯಮಿ ವಿಷ್ಣುಮೂರ್ತಿಯವರ ಹೆಸರು ಪ್ರಚಲಿತದಲ್ಲಿದೆ. ಆದರೆ ಇಲ್ಲಿ ದೇಶಪಾಂಡೆಯವರು ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ದೇಶಪಾಂಡೆಯವರು ಹಾಕಿದ ಗೆರೆಯನ್ನು ದಾಟುವುವವರೂ ಯಾರು ಇಲ್ಲ ಎನ್ನುವುದು ವಾಸ್ತವ ಸತ್ಯ!

  Share This
  300x250 AD
  300x250 AD
  300x250 AD
  Back to top