• first
  Slide
  Slide
  previous arrow
  next arrow
 • ‘ಗೋದಿನ- ಗೋವಿಗಾಗಿ ಆಲೆಮನೆ’ ಆಮಂತ್ರಣ ಬಿಡುಗಡೆ

  300x250 AD

  ಸಿದ್ದಾಪುರ: ತಾಲೂಕಿನ ಭಾನ್ಕುಳಿ ಶ್ರೀರಾಮದೇವಮಠ ಆವಾರದ ಗೋಸ್ವರ್ಗದಲ್ಲಿ ಜ.೧೨ರಿಂದ ೧೫ರವರೆಗೆ ನಡೆಯಲಿರುವ ‘ಗೋದಿನ ಮತ್ತು ಗೋವಿಗಾಗಿ ಆಲೆಮನೆ’ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ರಾಮಚಂದ್ರಾಪುರಮಠ ಮಹಾಸಂಸ್ಥಾನದ ರಾಘವೇಶ್ವರಭಾರತೀ ಶ್ರೀ ಹವ್ಯಕ ಸಮಾವೇಶದಲ್ಲಿ ಲೋಕಾರ್ಪಣೆ ಮಾಡಿದರು.

  ಈ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಅಖಿಲಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ, ಡಾ.ಜಿ.ಜಿ.ಹೆಗಡೆ, ಶಿವಾನಂದ ಹೆಗಡೆ ಇತರರು ಉಪಸ್ಥಿತರಿದ್ದರು.

  300x250 AD

  ರಾಘವೇಶ್ವರ ಭಾರತೀ ಶ್ರೀ ದಿವ್ಯ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಸಂಕ್ರಾAತಿಯ ಪರ್ವ ಕಾಲದಲ್ಲಿ ಗೋದಿನ ಮತ್ತು ಗೋವಿಗಾಗಿ ಆಲೆಮನೆ ಕಾರ್ಯಕ್ರಮ ನಾಲ್ಕು ದಿವಸಗಳ ಕಾಲ ಜರುಗುತ್ತಿದ್ದು, ಆಲೆಮನೆ, ಆಹಾರೋತ್ಸವ, ಗೋಪಾಲಕರಿಗೆ ಗೋಪಾಲಗೌರವ ಪ್ರಶಸ್ತಿ ಪ್ರದಾನ, ಗೋಮಾತೆಗೆ ಅಷ್ಟಾಂಗ ಸೇವೆ, ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

  Share This
  300x250 AD
  300x250 AD
  300x250 AD
  Back to top