Slide
Slide
Slide
previous arrow
next arrow

ವಿಪತ್ತು ನಿರ್ವಹಣಾ ಸ್ವಯಂ ಸೇವಕರಿಗೆ ಗುರುತಿನ ಚೀಟಿ ವಿತರಣೆ

300x250 AD

ಶಿರಸಿ: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ವಿಪತ್ತು ನಿರ್ವಹಣಾ ತರಬೇತಿ ಪಡೆದ ಸ್ವಯಂ ಸೇವಕರಿಗೆ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮವು ನಗರದ ಅಗ್ನಿಶಾಮಕ ದಳ ಕಚೇರಿಯಲ್ಲಿ ಬುಧವಾರ ನಡೆಯಿತು.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ,ಕಂದಾಯ ಇಲಾಖೆ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗಳು ಜಂಟಿಯಾಗಿ ಎನ್.ಡಿ.ಎಂ.ಎ. ಭಾರತ ಸರ್ಕಾರ ಹಾಗೂ ಎಸ್.ಡಿ.ಎಂ.ಎ. ಕರ್ನಾಟಕ ಸರ್ಕಾರ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಆಪತ್ತು ಮಿತ್ರ ಕಾರ್ಯಕ್ರಮದಡಿಯಲ್ಲಿನ ಸಮುದಾಯ ಸ್ವಯಂ ಸೇವಕರಿಗೆ ವಿಪತ್ತು ಪ್ರತಿಕ್ರಿಯೆ ಕುರಿತು 12ದಿನಗಳ ತರಬೇತಿಯನ್ನು ನೀಡಲಾಗಿದ್ದು ಶಿರಸಿ ತಾಲೂಕಿನ 130 ಸದಸ್ಯರಿಗೆ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿಯನ್ನು ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಮಂಜುನಾಥ ಸಾಲಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಗಾಗಲೇ ನಾವು 12ದಿನಗಳ ತರಬೇತಿ ನೀಡಿ ಯಾವುದೇ ತುರ್ತು ಸಂದರ್ಭದಲ್ಲೂ ಹೇಗೆ ಕಾರ್ಯ ನಿರ್ವಹಿಸಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದೇವೆ. ನಿಮ್ಮ ಭಾಗದಲ್ಲಿ ಅವಘಡಗಳಾದಾಗ ತಕ್ಷಣವೇ ಸ್ಪಂದಿಸುವ ಕಾರ್ಯವನ್ನು ತಾವೆಲ್ಲರೂ ಮಾಡುತ್ತೀರಿ ಎಂಬ ನಂಬಿಕೆ ನಮಗಿದೆ. ಇದರ ಮುಂದಿನ ಭಾಗವಾಗಿ ತಮಗೆ ತುರ್ತು ಕಿಟ್ ಹಾಗೂ ವಿಮಾ ಪತ್ರವನ್ನು ಶೀಘ್ರದಲ್ಲೇ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಿರಸಿ ಘಟಕದ ಅಧಿಕಾರಿ ಲಂಬೋದರ ಪಟಗಾರ, ಕಾರ್ತಿಕ ಸೇರಿ ಹಲವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top