• Slide
    Slide
    Slide
    previous arrow
    next arrow
  • ಸಂಘದಂಗಳದಲ್ಲಿ ಬೆಳೆದ ಶ್ರೀನಿವಾಸ ಧಾತ್ರಿ ಇನ್ನು ಕಾಂಗ್ರೆಸಿನ ವರ; ‘ಕೈ’ ನಾಯಕರೆದುರು ಪಕ್ಷ ಸೇರ್ಪಡೆ

    300x250 AD

    eUK ವಿಶೇಷ: ಬದುಕಲ್ಲಿ ಭರವಸೆ ಇದ್ದರೆ ಭವಿಷ್ಯವನ್ನು ರೂಪಿಸುವ ದಾರಿ ಕಾಣಿಸುತ್ತದೆ. ಜೀವನದಲ್ಲಿ ಉತ್ಸಾಹವಿದ್ದರೆ ಕನಸನ್ನು ನನಸಾಗಿಸುವ ಬಾಗಿಲು ತಾನಾಗೇ ತೆರೆಯುತ್ತದೆ ಎಂಬ ಮಾತಿನಂತೆ ಕಾಯಾ-ವಾಚಾ-ಮನಸಾ ಸದಾ ಕ್ಷೇತ್ರದ, ತನ್ನ ಜನರ, ನೊಂದವರ ಹಿತದ ಬಗ್ಗೆ ಕಾಳಜಿ ಮಾಡುವ ಮನಸ್ಸು ನಮ್ಮ ಶ್ರೀನಿವಾಸ ಭಟ್ಟ ಧಾತ್ರಿಯವರದ್ದಾಗಿದೆ ಎಂಬುದು ಧಾತ್ರಿಯವರ ಒಡನಾಡಿಗಳ ಅಂತರಂಗವಾಗಿದೆ.

    ಮೂಲತಃ ಜಿಲ್ಲೆಯ ಯಲ್ಲಾಪುರ ತಾಲೂಕಿನವರಾದ ಶ್ರೀನಿವಾಸ ಭಟ್, ಜಿಲ್ಲೆಯಲ್ಲಿ ತಮ್ಮ ಕೆಲಸದಿಂದ, ಜನತೆಯ ನಡುವಿನ ಒಡನಾಟದಿಂದ, ತಮ್ಮ ಧಾತ್ರಿ ಫೌಂಡೇಶನ್ ಮೂಲಕ ಮಾನವೀಯ ಕೆಲಸದ ಮೂಲಕ ಎಲ್ಲರ ಮನೆಮಾತಾಗಿದ್ದಾರೆ. ಹಾಗಾಗಿ ಶ್ರೀನಿವಾಸ ಭಟ್ ಎಂಬುದಕ್ಕಿಂತ ‘ಧಾತ್ರಿ’ ಎಂಬ ಅನ್ವರ್ಥದಿಂದಲೇ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

    ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಧಾತ್ರಿ ಪ್ರಾಪರ್ಟಿಸ್ ಎಂಬ ಬೃಹತ್ ಸಂಸ್ಥೆಯ ಮುಖ್ಯಸ್ಥರಾಗಿರುವ ಶ್ರೀನಿವಾಸ್ ಭಟ್ ಯಶಸ್ವೀ ಉದ್ಯಮಿಯೂ ಹೌದು. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮಾತಿಗೆ ಅನುರೂಪವೆನಿಸಿರುವ ಶ್ರೀನಿವಾಸ ಭಟ್, ‘ಧಾತ್ರಿ ಫೌಂಡೇಶನ್ ಮೂಲಕ ಬಡವರ, ದಮನಿತರ ಧ್ವನಿಯಾಗಿದ್ದಾರೆ. ಕೊವಿಡ್ ನಂತಹ ಸಮಯದಲ್ಲಿ ಅಧಿಕಾರವಿರುವ ಎಷ್ಟೋ ಜನಪ್ರತಿನಿಧಿಗಳು ಮನೆಯಲ್ಲಿ ಕುಳಿತಿರುವಾಗ ಮೈಚಳಿ ಬಿಟ್ಟು, ಕೊವಿಡ್ ಭಯಕ್ಕೆ ಸೆಡ್ಡು ಹೊಡೆದು ಯಲ್ಲಾಪುರ-ಮುಂಡಗೋಡು ಕ್ಷೇತ್ರದ ಬಡವರಿಗೆ, ನಿರ್ಗತಿಕರಿಗೆ ಕೊವಿಡ್ ಕಿಟ್ ನೀಡುವುದರ ಮೂಲಕ ಕ್ಷೇತ್ರದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

    300x250 AD

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರದಡಿಯಲ್ಲಿ ಬೆಳೆದ ಜನಪರ ಕಾಳಜಿಯ, ಕ್ಷೇತ್ರದ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿರುವ ಶ್ರೀನಿವಾಸ ಭಟ್ ಬಿಜೆಪಿಯಲ್ಲಿ ಕಳೆದ ಸಾಕಷ್ಟು ವರ್ಷಗಳಿಂದ ಪಕ್ಷದಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದ್ದಾರೆ. ಸಂಸದ ಅನಂತಕುಮಾರ ಹೆಗಡೆ ಕೇಂದ್ರ ಸಚಿವರಿರುವ ಸಮಯದಲ್ಲಿ ಸ್ಕಿಲ್ ಇಂಡಿಯಾ ಸಂಬಂಧಿಸಿ ಅನೇಕ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿದ್ದವರಲ್ಲಿ ಧಾತ್ರಿಯೂ ಒಬ್ಬರು.

    ಬಿಜೆಪಿಯಲ್ಲಿ ಈ ಬಾರಿ ಯಲ್ಲಾಪುರ-ಮುಂಡಗೋಡು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಇವರು, ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕಾಂಗ್ರೆಸ್ ಕೈ ಹಿಡಿಯುವ ಉತ್ಸುಕತೆ ತೋರಿದ್ದು ಅಚ್ಚರಿ ಎನಿಸಿದೆ. ಸಹಾಯ ಮಾಡುವ ಕೈಗೆ ಅಧಿಕಾರ ದೊರೆತರೆ ಇನ್ನಷ್ಟು ಬಲವಾಗಿ ಸಹಾಯಹಸ್ತ ಚಾಚಬಹುದು ಎಂಬ ಕಲ್ಪನೆಗೆ ಪೂರಕವಾಗಿ ಈ ಬಾರಿ ಶತಾಯ ಗತಾಯ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಮಹದಾಸೆಯಿಂದ ಡಿಸೆಂಬರ್ 15 ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಪಾಳಯವನ್ನು ಸೇರಲಿದ್ದಾರೆ. ಕ್ಷೇತ್ರದಲ್ಲಿ ಸಚಿವ ಹೆಬ್ಬಾರಿಗಿರುವ ವಿರೋಧಿ ಅಲೆ, ಕಾಂಗ್ರೆಸಿನ ಖಾಯಂ ಮತಗಳ ಲೆಕ್ಕಾಚಾರದಲ್ಲಿ ಪಕ್ಕಾ ಆಗಿರುವ ಧಾತ್ರಿ, ಈ ಬಾರಿ ಯಲ್ಲಾಪುರ-ಮುಂಡಗೋಡು ಕ್ಷೇತ್ರದ ಕಾಂಗ್ರೆಸಿನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆಗೆ ಮಾಜಿ ಶಾಸಕ ವಿ.ಎಸ್. ಪಾಟೀಲ್ ಸಹ ಇದೇ ದಿನದಂದು ಕಾಂಗ್ರೆಸ್ ಸೇರಲು ಹೊರಟಿರುವುದು ಈ ಕ್ಷೇತ್ರದ ಚುನಾವಣೆಯ ಕಾವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ.

    Share This
    300x250 AD
    300x250 AD
    300x250 AD
    Leaderboard Ad
    Back to top