ದಾಂಡೇಲಿ : ನಗರದ ಹಳೆ ನಗರ ಸಭಾ ಮೈದಾನದ ಹತ್ತಿರವಿರುವ ಕಾಮತ್ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭವಾದ ಕೇವಾ ವೆಲ್ನೇಸ್ ಆಯುರ್ವೇದ ಮಳಿಗೆಯ ಉದ್ಘಾಟನೆಯು ಜರುಗಿತು.
ನೂತನ ಮಳಿಗೆಯನ್ನು ನಗರದ ಹಿರಿಯ ವೈದ್ಯರಾದ ಡಾ.ಎನ್.ಜಿ.ಬ್ಯಾಕೋಡ್ ಅವರು ಉದ್ಘಾಟಿಸಿ ಮಾತನಾಡುತ್ತಾ, ಸದೃಢ ಆರೋಗ್ಯವೆ ಜೀವನದ ಯಶಸ್ಸಿಗೆ ಭದ್ರ ಬುನಾದಿ. ಈ ನಿಟ್ಟಿನಲ್ಲಿ ಆರೋಗ್ಯ ವರ್ಧನೆಗಾಗಿ ಉಪಯುಕ್ತ ಆಯುರ್ವೇದಿಕ್ ಔಷಧಿಗಳು ಈ ಕೇಂದ್ರದಲ್ಲಿ ಮಾರಾಟಕ್ಕೆ ಲಭ್ಯವಿರುವುದರಿಂದ ಈ ಭಾಗದ ಜನತೆಗೆ ಇದು ಬಹಳಷ್ಟು ಸಹಕಾರಿಯಾಗಲಿದೆ ಎಂದು ಹೇಳಿ ನೂತನ ಕೇವಾ ವೆಲ್ನೇಸ್ ಮಳಿಗೆಗೆ ಶುಭ ಕೋರಿದರು.
ಕೇವಾ ಕ್ಲಿನಿಕನ್ನು ನಗರದ ಹಿರಿಯ ಪತ್ರಕರ್ತರು ಹಾಗೂ ನಿವೃತ್ತ ಪ್ರಾಚಾರ್ಯರಾದ ಯು.ಎಸ್.ಪಾಟೀಲ್ ಅವರು ಉದ್ಘಾಟಿಸಿ ಆಯುರ್ವೇದಕ್ಕೆ ಜಗತ್ತಿನಲ್ಲಿ ತನ್ನದೇ ಆದ ವೈಶಿಷ್ಟ್ಯವಿದೆ. ನಿಸರ್ಗಕ್ಕೆ ಆರೋಗ್ಯ ಸಂರಕ್ಷಣೆ ಮಾಡುವ ಮಹತ್ವದ ಶಕ್ತಿಯಿದ್ದು, ಅಂತಹ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳು ಹಾಗೂ ಆಯುರ್ವೇದ ಚಿಕಿತ್ಸಾ ವಿಧಾನ ಇಂದು ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ನೂತನ ಕೇವಾ ಸೆಂಟರ್ ಮತ್ತು ಕ್ಲ್ಲಿನಿಕ್ ಈ ಭಾಗದ ಜನತೆಯ ಆರೋಗ್ಯ ವರ್ಧನೆಯಲ್ಲಿ ಪ್ರಮುಖ ಪಾತ್ರವಹಿಸಲೆಂದರು.
ಕೇವಾ ಸಂಸ್ಥೆಯ ಆರೋಗ್ಯ ಸಲಹೆಗಾರರಾದ ಮಹಮ್ಮದ್ ಹನೀಪ್ ಶೇಖ ಅವರು ಕೇವಾ ಮಳಿಗೆ ಮತ್ತು ಚಿಕಿತ್ಸಾ ಕೇಂದ್ರದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಮಳಿಗೆಯ ಮುಖ್ಯಸ್ಥರು ಹಾಗೂ ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಸೈಯದ್ ಇಸ್ಮಾಯಿಲ್ ತಂಗಳ್ ಅವರು ಸರ್ವರನ್ನು ಸ್ವಾಗತಿಸಿ, ಮಳಿಗೆಯ ಉನ್ನತಿಗೆ ಸರ್ವರ ಸಹಕಾರವಿರಲೆಂದರು. ಜರೀನಾ ಸೈಯದ್ ವಂದಿಸಿದರು.
ಈ ಸಂದರ್ಭದಲ್ಲಿ ಪಾತಿಮಾಬಿ ತಂಗಳ್, ಕಾರ್ಮಿಕ ಮುಖಂಡರಾದ ರಾಜೇಸಾಬ ಕೇಸನೂರು, ಕಟ್ಟಡದ ಮಾಲೀಕರಾದ ಅಶೋಕ್ ಕಾಮತ್, ಪ್ರಮುಖರುಗಳಾದ ಮಾರುತಿ ರಾವ್ ಮಾನೆ, ಪಿ.ಕೆ.ಜೋಶಿ, ರಿಯಾಜ್ ಸೈಯದ್, ಅನ್ವರ್ ಪಠಾಣ್, ಕಲ್ಪನಾ ಪಾಟೀಲ್, ಷಣ್ಮುಖ ಯರಗಟ್ಟಿ, ದೇವರಾಜ್, ಹುಸೇನ್, ಉಮೇಶ್ ಗುಂಡುಪ್ಕರ್, ಸುರೇಖ ಕಾಂಬಳೆ, ಸೇವಂತಿ, ಸತ್ತಾರ್ ಖಾನ್, ಖಲೀಲ್ ತಡಕೋಡ, ಸೈಯದ್ ಶಾ, ರವೀಂದ್ರ ಅಮ್ಮೇಂಬಳ, ಗೋಪಾಲ ಶಾಹ ಮೊದಲಾದವರು ಉಪಸ್ಥಿತರಿದ್ದರು.
ದಾಂಡೇಲಿಯಲ್ಲಿ ಕೇವಾ ವೆಲ್ನೇಸ್ ಆಯುರ್ವೇದ ಮಳಿಗೆಯ ಉದ್ಘಾಟನೆ
