Slide
Slide
Slide
previous arrow
next arrow

ಬಂಗೂರನಗರ ಪದವಿ ಕಾಲೇಜಿನಲ್ಲಿ ಗೀತ ಗಾಯನ, ಕವಿಗೋಷ್ಟಿ, ಉಪನ್ಯಾಸ ಕಾರ್ಯಕ್ರಮ

300x250 AD

ದಾಂಡೇಲಿ : ನಗರದ ಬಂಗೂರನಗರ ಪದವಿ ಮಹಾ ವಿದ್ಯಾಲಯದಲ್ಲಿ ಕಾಲೇಜಿನ ಕನ್ನಡ ವಿಭಾಗ, ವಾಣಿಜ್ಯ ವಿಭಾಗ ಮತ್ತು ಕಾಲೇಜಿನ ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ ಗೀತ ಗಾಯನ, ಕವಿಗೋಷ್ಟಿ, ಉಪನ್ಯಾಸ ಹಾಗೂ ಐತಿಹಾಸಿಕ ಫಲಿತಾಂಶವನ್ನು ತಂದ ಅಂತಿಮ ವರ್ಷದ ವಾಣಿಜ್ಯ ಪದವಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಕಾಲೇಜಿನ ಗ್ರಂಥಾಲಯದ ಸಭಾಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಧಾರವಾಡದ ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೊ.ಕೃಷ್ಣಮೂರ್ತಿ ಬಿಳಿಗೆರೆಯವರು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮವಾದ ಮೂಲಸೌಕರ‍್ಯ ಹಾಗೂ ಭೋದನಾಕ್ರಮವನ್ನು ಬಂಗೂರನಗರ ಪದವಿ ಕಾಲೇಜು ಹೊಂದಿದೆ. ಈ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಇಲ್ಲಿಯ ಶೈಕ್ಷಣಿಕ ಸಾಧನೆ ಶ್ಲಾಘನಾರ್ಹವಾದ ಸಾಧನೆಯಾಗಿದೆ ಎಂದರು.
ಉಪನ್ಯಾಸಕರಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿಗಳಾದ ಧಾರವಾಡದ ಶ್ರೀನಿವಾಸ ವಾಡಪ್ಪಿಯವರು ಕನ್ನಡ ಕಾವ್ಯದಲ್ಲಿ ಧನಾತ್ಮಕ ಚಿಂತನೆ ಎಂಬ ವಿಷಯದ ಬಗ್ಗೆ ಮಾರ್ಮಿಕವಾಗಿ ಉಪನ್ಯಾಸ ನೀಡಿ, ಕನ್ನಡದ ಕಾವ್ಯಕ್ಕೆ ನಾಡನ್ನು ಕಟ್ಟುವ ಮತ್ತು ಕನ್ನಡದ ಮನಸ್ಸುಗಳನ್ನು ಒಂದೂಗೂಡಿಸುವ ಮಹತ್ವದ ಶಕ್ತಿಯಿದೆ ಎಂದರು.
ಮುಖ್ಯ ಅತಿಥಿಗಳಾಗಿ ಧಾರವಾಡದ ಜಿಲ್ಲಾ ಕಸಾಪ ಅಧ್ಯಕ್ಷರಾದ ಡಾ.ಲಿಂಗರಾಜ ಅಂಗಡಿ, ಉತ್ತರ ಕನ್ನಡ ಜಿಲ್ಲೆಯ ಕಸಾಪ ಜಿಲ್ಲಾಧ್ಯಕ್ಷರಾದ ಬಿ.ಎನ್.ವಾಸರೆಯವರು ಭಾಗವಹಿಸಿ ಕನ್ನಡದ ನೆಲದಲ್ಲಿ ಜನ್ಮವೆತ್ತ ನಾವು ಕನ್ನಡವನ್ನು ಕಟ್ಟಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಆರ್.ಜಿ.ಹೆಗಡೆಯವರು ವಹಿಸಿದ್ದರು. ವೇದಿಕೆಯಲ್ಲಿ ದಾಂಡೇಲಿ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ರವಿ ಗೌತಮ್, ದಾಂಡೇಲಿ ಶಿಕ್ಷಣ ಸಂಸ್ಥೆಯ ಸಂಯೋಜಕರಾದ ಕೆ.ಜಿ.ಗಿರಿರಾಜ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಐತಿಹಾಸಿಕ ಫಲಿತಾಂಶವನ್ನು ತಂಡ ಅಂತಿಮ ವರ್ಷದ ವಾಣಿಜ್ಯ ಪದವಿ ವಿದ್ಯಾರ್ಥಿಗಳನ್ನು ಕಾಲೇಜುವತಿಯಿಂದ ಅಭಿನಂದಿಸಲಾಯಿತು. ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಾದ ಲಕ್ಷ್ಮಿ ಜೆ.ರಾಥೋಡ್, ಯೋಗಿತಾ.ವಿ.ಕಲಾಲ್, ಜಸ್ಸಿಕಾ.ವೈ.ಗೊಡಗು ಅವರನ್ನು ಸನ್ಮಾನಿಸಲಾಯಿತು. ಆನಂತರ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಎಸ್.ಎಸ್.ಹಿರೇಮಠ ಅವರಿಂದ ಗೀತ ಗಾಯನ ಕಾರ್ಯಕ್ರಮ ಜರುಗಿತು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಎಸ್.ದೊಡಮನಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ವಿನಯ್.ಎಸ್.ದೊಡ್ಡ ವಂದಿಸಿದರು. ಡಾ. ತೃಪ್ತಿ ನಾಯಕ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top