• Slide
  Slide
  Slide
  previous arrow
  next arrow
 • ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಕೌಸಲ್ಯಾ ರವೀಂದ್ರ ಅವರಿಗೆ ವನವಾಸಿ ಕಲ್ಯಾಣ ಸಂಸ್ಥೆಯ ವಸತಿ ನಿಲಯದಲ್ಲಿ ಸನ್ಮಾನ

  300x250 AD

  ದಾಂಡೇಲಿ : ವನವಾಸಿ ಕಲ್ಯಾಣ ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಿಂದ ಪೂರ್ಣಾವಧಿಯಾಗಿ ಸೇವೆ ಸಲ್ಲಿಸಿ, ವನವಾಸಿ ಜನಾಂಗದಲ್ಲಿ ಸಾಮಾಜಿಕ, ಶೈಕ್ಷಣಿಕ ಜಾಗೃತಿ ಮೂಡಿಸುವಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸಿ ರಾಷ್ಟ್ರ ಮಟ್ಟದ ಸಂತ ಈಶ್ವರ ಪ್ರಶಸ್ತಿ ಪುರಸ್ಕೃತರಾದ ಕೌಸಲ್ಯಾ ಅವರನ್ನು ದಾಂಡೇಲಿ ನಗರದ ಕುಳಗಿ ರಸ್ತೆಯಲ್ಲಿರುವ ವನವಾಸಿ ಕಲ್ಯಾಣ ಸಂಸ್ಥೆಯ ರುಕ್ಮಿಣಿ ಬಾಲಿಕಾ ನಿಲಯದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಉದ್ಯಮಿ ಅರುಣಾದ್ರಿ ರಾವ್ ಅವರು ಅಶಕ್ತರನ್ನು ಸಶಕ್ತರನ್ನಾಗಿಸಲು ಅತ್ಯಂತ ಬದ್ಧತೆಯಿಂದ ವನವಾಸಿ ಕಲ್ಯಾಣ ಸಂಸ್ಥೆ ತನ್ನನ್ನು ತಾನು ತೊಡಗಿಸಿಕೊಂಡಿದೆ. ವನವಾಸಿ ಹಾಗೂ ಬುಡಕಟ್ಟು ಸಮುದಾಯದ ಮಕ್ಕಳ ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮೂಲಕ ಸದಢೃ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸುತ್ತಾ ಬಂದಿರುವುದು ಶ್ಲಾಘನೀಯ. ವನವಾಸಿ ಕಲ್ಯಾಣ ಸಂಸ್ಥೆಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ ಕೌಸಲ್ಯಾ ಅವರು ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವುದು ವನವಾಸಿ ಕಲ್ಯಾಣ ಸಂಸ್ಥೆಗೆ ಸಂದ ಗೌರವ ಎಂದರು.
  ರಾಷ್ಟ್ರಮಟ್ಟದ ಸಂತ ಈಶ್ವರ ಪ್ರಶಸ್ತಿ ಪುರಸ್ಕೃತರಾದ ಕೌಸಲ್ಯಾ ಅವರನ್ನು ಹಾಗೂ ಅವರ ಪತಿ ರವೀಂದ್ರ ಅವರನ್ನು ಈ ಸಂದರ್ಭದಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯ ಪರವಾಗಿ ಗೌರವಪೂರ್ವಕವಾಗಿ ಸನ್ಮಾನಿಸಲಾಯ್ತು.
  ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಕೌಸಲ್ಯಾ ಅವರು ವನವಾಸಿ ಕಲ್ಯಾಣ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದೇ ನನ್ನ ಜೀವನದ ಬಹುದೊಡ್ಡ ಭಾಗ್ಯ. ಸಂಕಷ್ಟದ ಜೊತೆ ಜೊತೆಯಲ್ಲೆ ಇಷ್ಟಪಟ್ಟು ಸಾಗಿ, ಸಂಕಷ್ಟವನ್ನು ಮೆಟ್ಟಿನಿಂತು ಸಂಸ್ಥೆಯ ಆಶಯಗಳನ್ನು ಈಡೇರಿಸಲು ಪ್ರಯತ್ನಶೀಲರಾಗಿ ಯಶಸ್ವಿಯಾದಾಗ ಸಿಗುವ ಆತ್ಮತೃಪ್ತಿಯನ್ನು ವರ್ಣಿಸಲು ಸಾಧ್ಯವಿಲ್ಲ. ಶ್ರಮ, ಸಾಧನೆ ಮತ್ತು ಸೇವೆ ಮಾಡಬೇಕೆಂಬ ಉತ್ಕಟ ಬಯಕೆಯನ್ನು ಹೊತ್ತಿ, ನಮ್ಮನ್ನು ನಾವು ಅಂತಹ ಕಾರ್ಯದಲ್ಲಿ ತೊಂಡಾಗಿಕೊ0ಡಾಗ ನಮಗೆ ಪ್ರೇರಣಾದಾಯಿಯಾಗಿ ಹಾಗೂ ಇನ್ನಷ್ಟು ಸೇವೆ ಮಾಡಲು ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಇಂತಹ ಪ್ರಶಸ್ತಿಗಳು ನಮ್ಮನ್ನು ಅರಸಿ ಬರುತ್ತವೆ ಎನ್ನುವುದಕ್ಕೆ ನಾನು ಸಹ ಸಾಕ್ಷಿಯ ರೂಪದಲ್ಲಿ ನಿಂತಿದ್ದೇನೆ. ಅಂದು ಹಲವಾರು ಎಡರು ತೊಡರುಗಳನ್ನು ದಾಟಿ, ವನವಾಸಿ ಕಲ್ಯಾಣ ಸಂಸ್ಥೆಯ ನಿಜವಾದ ಉದ್ದೇಶವನ್ನು ಸಾಕಾರಗೊಳಿಸಲು ಶ್ರಮಿಸಿದ್ದೇವೆ ಎಂದು ಅಂದಿನ ಸ್ಥಿತಿಗತಿಗಳನ್ನು ಮೆಲುಕು ಹಾಕಿದರು. ನನ್ನ ಜೊತೆ ವನವಾಸಿ ಕಲ್ಯಾಣ ಸಂಸ್ಥೆಯ ಸರ್ವ ಪದಾಧಿಕಾರಿಗಳು, ಸ್ವಯಂ ಸೇವಕರು, ವನವಾಸಿ ವಿದ್ಯಾರ್ಥಿನಿಯರು, ನನ್ನ ಪಾಲಕರು ಹಾಗೂ ಪತಿಯವರು ತುಂಬು ಹೃದಯದ ಸಹಕಾರ ನೀಡಿದ ಪರಿಣಾಮವಾಗಿ ಈ ಸಾಧನೆ ಮಾಡಲು ಸಾಧ್ಯವಾಯಿತೆಂದರು.
  ವನವಾಸಿ ಕಲ್ಯಾಣ ಸಂಸ್ಥೆಯ ಅಧ್ಯಕ್ಷರಾದ ರವಿ ಲಕ್ಷ್ಮೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಸುದೇವ ಜೋಶಿಯವರು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಅಕ್ಷತಾ ಮಂಗೇಶ್ಕರ್ ವಂದಿಸಿದರು. ಮೀನಾಕ್ಷಿ ಕನ್ಯಾಡಿ ಕರ‍್ಯಕ್ರಮವನ್ನು ನಿರೂಪಿಸಿದರು. ಕರ‍್ಯಕ್ರಮದಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿನಿಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top