Slide
Slide
Slide
previous arrow
next arrow

ವಿಷಯದಲ್ಲಿನ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಕಾರ್ಯಗಾರಗಳು ಸಹಕಾರಿ

300x250 AD

ಯಲ್ಲಾಪುರ : ವಿಷಯಗಳಲ್ಲಿರುವ ಸಂದೇಹಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಬಗೆಹರಿಸಿಕೊಂಡು, ‘ಅನುತ್ತೀರ್ಣರಾಗುವಂತಹ ವಿದ್ಯಾರ್ಥಿಗಳು ವಿಷಯದಲ್ಲಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಉತ್ತೀರ್ಣರಾಗುವಂತಹ ಮಾರ್ಗೋಪಾಯಗಳನ್ನು ಕಂಡು ಹಿಡಿದು ಜಿಲ್ಲೆಯ ಫಲಿತಾಂಶ ಹೆಚ್ಚಾಗುವಂತೆ ಪ್ರಯತ್ನಿಸಿ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹನುಮಂತಪ್ಪ ನಿಟ್ಟೂರ ಉಪನ್ಯಾಸಕರುಗಳಿಗೆ ಕರೆ ನೀಡಿದರು.
ಪಟ್ಟಣದ ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜೀವಶಾಸ್ತ್ರ ಉಪನ್ಯಾಸಕರ ವೇದಿಕೆ ಹಾಗೂ ವೈ.ಟಿ.ಎಸ್.ಎಸ್. ಶಿಕ್ಷಣ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ವಿಷಯಾದಾರಿತ ಜೀವಶಾಸ್ತ್ರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕೆಯಲ್ಲಿ ಹೆಚ್ಚಿನ ಪ್ರಗತಿಗೆ ಇಂತಹ ಕಾರ್ಯಗಾರಗಳು ಕಾರಣವಾಗುತ್ತವೆ. ಎಂದರು.
ಕೈಪಿಡಿಗಳನ್ನು ಬಿಡುಗಡೆಗೊಳಿಸಿ, ಉಪನಿರ್ದೇಶಕರನ್ನು ಸನ್ಮಾನಿಸಿದ ವೈ.ಟಿ.ಎಸ್.ಎಸ್. ನಿರ್ದೇಶಕ ನಾಗರಾಜ ಮದ್ಗುಣಿ ಮಾತನಾಡಿ ‘ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ವಿಷಯಗಳಲ್ಲಿ ಹೊಸ ಹೊಸ ಸಂಶೋಧನೆಗಳು ಕಂಡು ಹಿಡಿಯಲ್ಪಡುತ್ತಿರುತ್ತವೆ. ಅವುಗಳ ಮೇಲೆ ಬೆಳಕು ಚೆಲ್ಲಲು, ಮಸುಕಾದ ಚಿನ್ನವನ್ನು ಪುಟಕ್ಕಿಟ್ಟು ಹೊಳಪು ತರುವಂತೆ ಉಪನ್ಯಾಸಕರಿಗೆ ವಿಷದ ಜ್ಞಾನವನ್ನು ರಿಫ್ರೆಶ್ ಆಗಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಿವೆ ಎಂದರು.
ಉತ್ತರ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜೀವಶಾಸ್ತ್ರ ಉಪನ್ಯಾಸಕರ ವೇದಿಕೆ ಅಧ್ಯಕ್ಷ ರಮೇಶ ಪತ್ರೇಕರ್ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ನಾಗರಾಜ ನಾಯ್ಕ ವೇದಿಕೆಯಲ್ಲಿದ್ದರು.
ಶಿರಸಿಯ ಅರಣ್ಯ ಕಾಲೇಜಿನ ಉಪನ್ಯಾಸಕ ಶ್ರೀಧರ ಭಟ್ಟ ಜೀವ ವೈವಿದ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನಿವೃತ್ತಿ ಹೊಂದಲಿರುವ ಜೀವ ಶಾಸ್ತ್ರ ಉಪನ್ಯಾಸಕರಾದ ಕಾರವಾರದ ಟಿ.ಸಿ.ರಮೇಶ ಹಾಗೂ ನಾಣಿಕಟ್ಟಾದ ಆನಂದ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಶಿರಸಿಯ ನೀರಿನ ರಾಸಾಯನಿಕ ತಜ್ಞೆ ಅಶ್ವಿನಿ ನಾಯ್ಕ ನೀರಿನ ಪರೀಕ್ಷೆ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ನಯನಾ ಸಂಗಡಿಗರು ಪ್ರಾರ್ಥನಿಸಿದರು. ವೈ.ಟಿ.ಎಸ್.ಎಸ್. ಪ್ರಾಂಶುಪಾಲೆ ವಾಣಿಶ್ರೀ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನ್ನಾಡಿದರು, ಉಪನ್ಯಾಸಕರಾದ ವಿಕಾಸ ಮೋಕಾಶಿ ನಿರೂಪಿಸಿದರು, ರಾಮಕೃಷ್ಣ ನಾಯಕ ವಂದಿಸಿದರು. ಜಿಲ್ಲೆಯ ಎಲ್ಲ ಪದವಿ ಪೂರ್ವ ಕಾಲೇಜುಗಳ ಜೀವ ಶಾಸ್ತ್ರ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

300x250 AD
Share This
300x250 AD
300x250 AD
300x250 AD
Back to top