• Slide
    Slide
    Slide
    previous arrow
    next arrow
  • ಹಾರ್ಸಿಕಟ್ಟಾದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ

    300x250 AD

    ಸಿದ್ದಾಪುರ; ತಾಲೂಕಿನ ಹಾರ್ಸಿಕಟ್ಟಾ ಅಶೋಕ ಪ್ರೌಢಶಾಲೆಯಲ್ಲಿ ಸಿದ್ದಾಪುರ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
    ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ,ಹವಾಲ್ದಾರ ರಮೇಶ ಕೂಡಲ, ರೇಖಾ ಎಂ.ಎಸ್, ಸಾವಿತ್ರಮ್ಮ ಎಚ್.ಆರ್. ಅವರು ಅಪರಾಧಗಳು ಯಾವ ರೀತಿಯಲ್ಲಿ ನಡೆಯುತ್ತದೆ. ಅವುಗಳನ್ನು ಮುಂಜಾಗೃತೆಯಾಗಿ ಹೇಗೆ ತಡೆಯಬಹುದು. ಅಪರಾಧಗಳು ನಡೆದಾಗ ಹೇಗೆ ಕಾರ್ಯನಿರ್ವಹಿಸಬೇಕು. ಇದರಲ್ಲಿ ವಿದ್ಯಾರ್ಥಿಗಳ ಪಾತ್ರ ಏನು. ಸಾರ್ವಜನಿಕರು ಯಾವ ರೀತಿಯಾಗಿ ಸಹಕರಿಸಬೇಕು ಸೇರಿದಂತೆ ಮತ್ತಿತರ ವಿಷಯದ ಕುರಿತು ಹಾಗೂ ಮೊಬೈಲ್ ಬಳಕೆಯಿಂದಾಗುತ್ತಿರುವ ಉಪಯೋಗ ಹಾಗೂ ಅದರ ದುಷ್ಪರಿಣಾಮದ ಕುರಿತು ಮಾಹಿತಿ ನೀಡಿದರು.
    ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರೌಢಶಾಲಾ ಮುಖ್ಯಾಧ್ಯಾಪಕ ರಾಜೇಂದ್ರ ಕಾಂಬಳೆ ಅವರಿಗೆ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ ಅವರು ಅಪರಾಧ ತಡೆಯುವ ಕುರಿತು ಸಮಗ್ರ ಮಾಹಿತಿ ಇರುವ ಕರಪತ್ರ ನೀಡಿದರು.
    ಶಿಕ್ಷಕರಾದ ಸುಬ್ರಹ್ಮಣ್ಯ ಗೌಡ, ಶ್ರೀಪಾದ ಹೆಗಡೆ, ದಾಕ್ಷಾಯಣಿ ಮಡಿವಾಳ, ಬಸವರಾಜ್ ಇತರರಿದ್ದರು.ಶಿಕ್ಷಕಿ ಕವಿತಾ ಬಿ.ಎಸ್. ಮಾಧವ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top