• Slide
    Slide
    Slide
    previous arrow
    next arrow
  • ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಲು ಆಗ್ರಹಿಸಿ ಶಾಸಕರಿಗೆ ಮನವಿ

    300x250 AD

    ಭಟ್ಕಳ : ರಾಜ್ಯ ಸರ್ಕಾರವು 1-6-2006 ರಿಂದ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ಜಾರಿಗೋಳಿಸಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಡಿಸೆಂಬರ 19ರಿಂದ ಆರಂಭವಾಗುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರರ ಸಂಘದ ಭಟ್ಕಳ ಘಟಕವು ಮಂಗಳವಾರದAದು ಇಲ್ಲಿನ ತಾಲೂಕು ಆಡಳಿತ ಸೌಧದಲ್ಲಿ ಶಾಸಕ ಸುನಿಲ್ ನಾಯ್ಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

    ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ‘ಕಳೆದ 3 – 4 ದಿನಗಳ ಹಿಂದೆ ಈ ಬಗ್ಗೆ ಗಮನಕ್ಕೆ ತಂದಾಗ ಹಳೆಯ ಪಿಂಚಣಿ ಯೋಜನೆಯ ಬಗ್ಗೆ ಇಂಧನ ಸಚಿವ ಸುನಿಲ ಕುಮಾರ ಅವರಲ್ಲಿ ಚರ್ಚಿಸಿದ್ದು ಈ ಬಗ್ಗೆ ರಾಜ್ಯದ ಹಲವೆಡೆ ಬೇಡಿಕೆ ಇದ್ದು ಈ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಚರ್ಚಿಸುವ ಭರವಸೆಯನ್ನು ನೀಡಿದ್ದು ಈ ಬಗ್ಗೆ ನಾಳೆ ಬೆಂಗಳೂರಿಗೆ ತೆರಳುವವರಿದ್ದು ಈ ಸಂಬಂಧ ಮುಖ್ಯಮಂತ್ರಿಗಳಲ್ಲಿ ಹಾಗೂ ಸಚಿವ ಆರ್ ಅಶೊಕ ಬಳಿ ಚರ್ಚಿಸಿ ಇಲ್ಲಿನ ಸಂಪೂರ್ಣ ವಿವರಗಳನ್ನು ಅವರಿಗೆ ಒದಗಿಸಿ ಸರ್ಕಾರದ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ವಿಷಯವನ್ನು ಪ್ರಸ್ತಾಪಿಸುವುದಾಗಿ ಈ ಅಧಿವೇಶನದ ಅವಧಿಯಲ್ಲಿ ಅಧಿಕಾರಿ ವರ್ಗದವರ ಬೇಡಿಕೆಯನ್ನು ನೆರವೇರಿವ ಬಗ್ಗೆ ಭರವಸೆಯನ್ನು ನೀಡಿದರು.

    ಈ ಸಂಧರ್ಭದಲ್ಲಿ ಬೇಡಿಕೆಗೆ ಆಗ್ರಹಿಸಿ ತಾಲೂಕಾ ಆಡಳಿತ ಸೌಧದ ಎದುರಿನಲ್ಲಿ ಅಧಿಕಾರಿ ವರ್ಗದವರು ಸಾಂಕೆತಿಕವಾಗಿ ಪ್ರತಿಭಟಿಸಿದರು.

    300x250 AD

    ಈ ಸಂಧರ್ಭದಲ್ಲಿ ಭಟ್ಕಳ ತಹಶಿಲ್ದಾರ ಸುಮಂತ ಬಿಇ, ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಎನ್, ಎನ್.ಪಿ.ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಹೆಗಡೆ, ತಾಲೂಕಾಧ್ಯಕ್ಷ ಶೇಖರ ಪೂಜಾರಿ, ಖಜಾಂಚಿ ಗುಡ್ಡಪ್ಪ ಸೇರಿದಂತೆ ಹಲವಾರು ಸರ್ಕಾರಿ ನೌಕರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top