Slide
Slide
Slide
previous arrow
next arrow

ರೆಡ್ ಕ್ರಾಸ್ ಸಾಮಾಜಿಕ ಕಾರ್ಯವನ್ನ ಇನ್ನಷ್ಟು ವಿಸ್ತರಿಸಿಕೊಳ್ಳಲಿ: ಡಿಸಿ ಹಾರೈಕೆ

300x250 AD

ಕಾರವಾರ: ಹಿಂದು ಹೈ ಸ್ಕೂಲ್ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಶತಮಾನೋತ್ಸವದ ನಿಮಿತ್ತವಾಗಿ ಆಯೋಜಿಸಲಾದ ‘ಪರಿಪೋಷಣಂ’ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದು ತನ್ನ ಚಟುವಟಿಕೆಯನ್ನು ರಕ್ತದಾನ, ನೆರೆಯ ಸಂದರ್ಭದಲ್ಲಿ ಸಂತ್ರಸ್ತರ ಸಹಾಯಕ್ಕೆ ಮುಂದಾಗುವುದು ಹಾಗೂ ವಿವಿಧ ಆರೋಗ್ಯ ಜಾಗೃತಿ ಕಾರ್ಯಕ್ರಮಗಳಲ್ಲದೇ ಯುವಜನಗೆ ಮಾದಕ ವ್ಯಸನದತ್ತ ವಾಲದಂತೆ ಕೂಡ ಸಂಸ್ಥೆ ತನ್ನ ಸೇವೆಯನ್ನು ವಿಸ್ತರಿಸಬೇಕು ಎನ್ನುವ ಕರೆ ನೀಡಿದರು.
ಜಿಲ್ಲಾ ರೆಡ್ ಕ್ರಾಸ್ ಘಟಕದ ಚೇರ್ಮನ್ ವಿ.ಎಮ್.ಹೆಗಡೆ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಿಂದ ಭಾರತದಲ್ಲಿ ಕೂಡ ಸ್ಥಾಪನೆಯಾಗಿ ಇಂದು ಭಾರತ ದೇಶದಲ್ಲಿ ತನ್ನ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದೆ. ಜನಜಾಗೃತಿ, ಆರೋಗ್ಯ, ರಕ್ತದಾನ ಹಾಗೂ ಯುದ್ಢಗಾಯಾಳುಗಳ ಸೇವೆ ಹಾಗೂ ಮಹಾಮಾರಿಯ ಸಂದರ್ಭದಲ್ಲಿ ಸಮಾಜದಲ್ಲಿ ಸೇವೆಯಲ್ಲಿ ತೊಡಗಿಕೊಳ್ಳುವ ಅದರ ಕಾರ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಪ್ರಾಸ್ತಾವಿಕವಾಗಿ ಘಟಕದ ಕಾರ್ಯದರ್ಶಿ ಜಗದೀಶ ಬೀರ್ಕೋಡಿಕರ ಮಾತನಾಡಿ, ಎಲ್ಲ ಅತಿಥಿಗಳನ್ನು ಹಾಗೂ ಶಿಬಿರಾರ್ಥಿಗಳಾದ ಶಿಕ್ಷಕರನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶ ಸಫಲವಾಗುವಂತೆ ಮಾಡಲು ಕೋರಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತೇಶ ನಾಯಕ, ಬಾಲಮಂದಿರದ ಮುಖ್ಯಾಧ್ಯಾಪಕಿ ಅಂಜಲಿ ಮಾನೆ ಕಾರ್ಯಕ್ರಮದ ಸದುದ್ದೇಶವನ್ನು ಶ್ಲಾಘಿಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಸಿದ್ದಪ್ಪ ಬೀಳಗಿ, ಅಪರಾಧ ತಡೆ, ಅಪಘಾತವಾದಾಗ ಮಾಡಬಹುದಾದ ಕಾರ್ಯಗಳು, ಕಾನೂನಿನ ಸೂಕ್ಷ್ಮತೆ ಕುರಿತಾಗಿ ವಿಸ್ತೃತವಾಗಿ ಮಾಹಿತಿ ನೀಡಿ ಶಿಬಿರಾರ್ಥಿಗಳಲ್ಲಿ ಅರಿವು ಮೂಡಿಸಿದರು. ಭೋಜನ ವಿರಾಮದ ನಂತರ ಮುಂದುವರೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಎಚ್‌ಓಡಿ ಹಾಗೂ ಸಮುದಾಯ ಔಷಧಿ ವಿಭಾಗದ ಮುಖ್ಯಸ್ಥ ಡಾ.ಕೆ.ಹೇಮಗಿರಿ ಅವರು ತುರ್ತು ಅವಘಡ ಹಾಗೂ ಅಪಘಾತದ ಸಂಧರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಕುರಿತಾಗಿ ಮಾಹಿತಿ ಹಾಗೂ ತರಬೇತಿಯನ್ನು ನೀಡಿದರು.
ಜ್ಯೂನಿಯರ್ ರೆಡ್ ಕ್ರಾಸ್ ಘಟವನ್ನು ಹೊಂದಿದ ಹೈಸ್ಕೂಲ್‌ಗಳ ಸುಮಾರು ಎಪ್ಪತ್ತು ಶಿಕ್ಷಕರು ಭಾಗವಹಿಸಿದ್ದರು. ಅಲ್ಲದೇ ರಾಜ್ಯ ಸದಸ್ಯರಾದ ಸದಾನಂದ ನಾಯಕ, ವಿಪತ್ತು ನಿರ್ವಹಣಾ ಸಮೀತಿ ಅಧ್ಯಕ್ಷ ಮಾಧವ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮೀತಿ ಅಧ್ಯಕ್ಷೆ ಖೈರುನ್ನೀಸಾ ಶೇಖ್, ರೆಡ್ ಕ್ರಾಸ್ ಕಾರ್ಯಕಾರಿ ಸಮೀತಿ ಸದಸ್ಯರಾದ ಸಲೀಮ್ ಶೇಖ್, ಅಲ್ತಾಫ್ ಶೇಖ್, ಎಲ್.ಕೆ. ನಾಯ್ಕ, ಕಚೇರಿ ನಿರ್ವಾಹಕರಾದ ಯೋಗೇಶ ಶಾನಭಾಗ ಹಾಗೂ ನೇಹಾ ಬೀರ್ಕೋಡಿಕರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸಿದರು. ಕೊನೆಯಲ್ಲಿ ವಂದನಾರ್ಪಣೆ ಮಾಡಿದ ಖಜಾಂಚಿ ರಾಮಾ ನಾಯ್ಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top