ಹಳಿಯಾಳ: ಮೈಸೂರಿನ ಶರಣು ವಿಶ್ವವಚನ ಫೌಂಡೇಶನ್ ಕೊಡಮಾಡುತ್ತಿರುವ 2022ನೇ ಸಾಲಿನ ಪ್ರತಿಷ್ಠಿತ ‘ಚಿನ್ಮಯ ಜ್ಞಾನಿ’ರಾಜ್ಯ ಮಟ್ಟದ ಪ್ರಶಸ್ತಿಗೆ ತಾಲೂಕಿನ ಮಂಗಳವಾಡದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಸಹಶಿಕ್ಷಕಿ ಭಾರತಿ ನಲವಡೆಯವರು ಆಯ್ಕೆಯಾಗಿದ್ದಾರೆ.
ಭಾರತಿ, ಕೇವಲ ಶಿಕ್ಷಕಿಯಾಗಿಯಲ್ಲದೇ, ಸಾಹಿತಿ, ಆಧುನಿಕ ವಚನಗಳ ರಚನೆಗಾರ್ತಿ, ಮಾನವೀಯ ಮೌಲ್ಯಗಳ ಚಿಂತಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರ ಕಾರ್ಯಕುಶಲತೆಯನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಡಿ.18ರಂದು ಮೈಸೂರು ನಗರದ ಬೋಗಾದಿಯಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಫೌಂಡೇಶನ್‌ನ ಸಂಸ್ಥಾಪಕರಾದ ವಚನಕುಮಾರಸ್ವಾಮಿ ಮತ್ತು ರೂಪಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾದ ಭಾರತಿ ನಲವಡೆಯವರನ್ನು ಶಾಲೆಯ ಮುಖ್ಯಾಧ್ಯಾಪಕ ಎನ್.ಎಮ್.ನಾಗ್ರೇಶಿ ಹಾಗೂ ಸಮಸ್ತ ಶಿಕ್ಷಕ ವರ್ಗದವರು, ಎಸ್‌ಡಿಎಮ್‌ಸಿಯವರು ಅಭಿನಂದಿಸಿದ್ದಾರೆ.