ಶಿರಸಿ: ಸುಕರ್ಮ ಕೇಂದ್ರವು ಸನಾತನ ಧರ್ಮ ಭಾವನೆಯನ್ನು ಬೆಳೆಸಿ ಕಾಪಾಡುವ ಜ್ಞಾನ ಕೇಂದ್ರವಾಗಲಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಯಡಹಳ್ಳಿಯಲ್ಲಿ ಸುಕರ್ಮ ಕೇಂದ್ರದ ಫಲಕ ಅನಾವರಣಗೊಳಿಸಿ ಮಾತನಾಡಿ, ಸನಾತನ ಧರ್ಮ ಭಾವನೆಯನ್ನು ಬೆಳೆಸಿ ಕಾಪಾಡಿಕೊಂಡು ಹೋಗಬೇಕಾದದ್ದು ಇಂದಿನ ಸ್ಥಿತಿಯಲ್ಲಿ ಅತಿ ಅಗತ್ಯವಿದೆ. ಯಜ್ಞ -ಯಾಗಾದಿ ಧರ್ಮ ಚಿಂತನೆಯಿಂದ ಮನುಷ್ಯ ಮನಸ್ಸಿನ ವಿಕಾರವನ್ನು ಕಳೆದುಕೊಂಡು ಮಾನಸಿಕ ಶಾಂತಿಯನ್ನು ಹೊಂದಲು ಸಾಧ್ಯವಿದೆ. ಇದನ್ನೇ ಭಾರತೀಯರು ವಿಶ್ವಕ್ಕೆ ವಿಶಿಷ್ಟವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ಇದನ್ನ ಉಳಿಸಿ ಬೆಳೆಸಿಕೊಂಡು ಹೋಗುವದು ನಮ್ಮೆಲ್ಲರ ಆದ್ಯ ಕರ್ತವ್ಯವು ಆಗಿದೆ ಎಂದು ಹೇಳಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಅಂಕಣಕಾರ ಜ್ಯೋತಿಷಿ ವಿ.ಡಿ.ಭಟ್ ಕರಸುಳ್ಳಿ, ಧಾರ್ಮಿಕ ಭಕ್ತಿ ಭಾವಕ್ಕೆ ಸಾಹಿತ್ಯ ಸಂಸ್ಕೃತಿಯ ಉತ್ತೇಜನಕ್ಕಾಗಿ ಈ ಕೇಂದ್ರವನ್ನ ಸ್ಥಾಪಿಸಿದ ಬಗ್ಗೆ ವಿವರಿಸಿದ್ದರು. ಯಡಳ್ಳಿ ಭಾಸ್ಕರ್ ಮನೆಯ ರಾಜಾರಾಮ ಹೆಗಡೆ, ಭಾಸ್ಕರ ಹೆಗಡೆ, ಗಜಾನನ ಹೆಗಡೆ ಸ್ವಾಗತಿಸಿದರು.