ಹೊನ್ನಾವರ: ರಾಜಕೀಯಕ್ಕಾಗಿ ನಕಲಿ ಹಿಂದುತ್ವವಾದಿ ನಾನಲ್ಲ. ತೋರಿಕೆಯ ಹಿಂದುತ್ವ ಅನುಸರಿಸದೇ ದೇವಾಲಯದ ಅಭಿವೃದ್ಧಿಯ ಮೂಲಕ ಹಿಂದುತ್ವ ಪಾಲಿಸುತ್ತೇನೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಅವರು ತಾಲೂಕಿನ ಇಡಗುಂಜಿಯಲ್ಲಿ ಏತ ನೀರಾವರಿ ಯೋಜನಾ ನಿರ್ಮಾಣ ಕಾಮಗಾರಿಯ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿ, ಜಿಲ್ಲೆಯ ದೊಡ್ಡ ಪ್ರಮಾಣದ ಪ್ರಥಮ ಏತ ನೀರಾವರಿ ಯೋಜನೆ ಇದಾಗಿದೆ. 2017ರಲ್ಲಿ ಈ ಯೋಜನೆ ಆರಂಭವಾದರೂ ಒಂದು ವರ್ಷದವರೆಗೆ ಯಾವುದೇ ಪ್ರಗತಿ ಕಾಣದೇ ನಂತರ ಇಲ್ಲಿಯ ನಿವಾಸಿಗಳೊಂದಿಗೆ ಮುಖ್ಯಮಂತ್ರಿಗಳ ಭೇಟಿ ಬಳಿಕ ಯೋಜನೆ ವೇಗ ಪಡೆದಿದ್ದು, ಇಂದು ಉದ್ಘಾಟನೆಗೊಂಡಿದೆ. ಈ ಯೋಜನೆಯಲ್ಲಿ 375 ಎಚ್‌ಪಿ ಎರಡು ಪಂಪ್, ವಿದ್ಯುತ್ ಮೋಟಾರ್, 9 ಮೀ. ವ್ಯಾಸದ 22 ಮೀ. ಎತ್ತರದ ಜ್ಯಾಕ್‌ವೆಲ್, 2800 ಮೀ ಉದ್ದದ 60 ಸೆ.ಮೀ ವ್ಯಾಸದ ರೈಸ್‌ಮೆನ್ ಕೊಳವೆ, ಡೆಲಿವರಿ ಚೇಂಬರ್, ಒಳಗೊಂಡಿದೆ. 650 ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುವುದು ವಿಶೇಷವಾಗಿದೆ ಇದರ ಸದುಪಯೋಗವನ್ನು ಈ ಭಾಗದವರು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಚಿಕ್ಕ ವಯಸ್ಸಿನಲ್ಲೆಯೇ ಶಾಸಕರನ್ನಾಗಿಸಿ ಜವಬ್ದಾರಿ ಹೆಚ್ಚಿಸಿದ್ದೀರಿ. ಅಧಿಕಾರಕೊಸ್ಕರ ಖುರ್ಚಿಗೆ ಅಂಟಿಕೊಂಡು ಕುಳಿತುಕೊಳ್ಳುವ ಶಾಸಕ ನಾನಲ್ಲ. ಜನತೆಯ ಭಾವನೆಗೆ ಚ್ಯುತಿ ಬಂದರೆ ನಾನು ರಾಜೀನಾಮೆ ನೀಡಲು ಸಿದ್ದ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಇದೇ ವೇಳೆ ಸ್ಥಳ ದಾನಿಗಳನ್ನು, ಗುತ್ತಿಗೆದಾರರನ್ನು ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಮಾವಳ್ಳಿ ಗ್ರಾ.ಪಂ.ಅಧ್ಯಕ್ಷ ಮಹೇಶ ನಾಯ್ಕ, ಇಡಗುಂಜಿ ಗ್ರಾ.ಪಂ. ಉಪಾಧ್ಯಕ್ಷೆ ರಾಧಾ ದೀನ್ ದಯಾಳ್, ಸದಸ್ಯರಾದ ಕಮಲಾಕರ ನಾಯ್ಕ, ಜಿ.ಕೆ.ಹೆಗಡೆ, ಗೋಪಾಲ ನಾಯ್ಕ, ಶಿವಾನಂದ ಗೌಡ, ರಾಮಗೌಡ, ಇಲಾಖಾಧಿಕಾರಿ ವಿನೋದ ನಾಯ್ಕ ಗುತ್ತಿಗೆದಾರ ಅಶೋಕ ಶೆಟ್ಟಿ, ಸ್ಥಳದಾನಿಗಳಾದ ಸುಬ್ರಾಯ ಅಂಬಿಗ ಸ್ಥಳಿಯರಾದ ರಾಮ ಗೌಡ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜಕೀಯಕ್ಕಾಗಿ ನಕಲಿ ಹಿಂದುತ್ವವಾದಿ ನಾನಲ್ಲ: ಶಾಸಕ ಸುನೀಲ ನಾಯ್ಕ್
