• Slide
  Slide
  Slide
  previous arrow
  next arrow
 • ಆಟ- ಪಾಠಕ್ಕೆ ವಯಸ್ಸಿನ ಮಿತಿ ಇಲ್ಲ, ಭಾಗವಹಿಸುವಿಕೆ ಮುಖ್ಯ: ಸುನಂದಾ ದಾಸ್

  300x250 AD

  ಯಲ್ಲಾಪುರ: ವಿದ್ಯೆ ಕಲಿಯಲು, ಆಟ ಆಡಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಮಕ್ಕಳು- ಯುವಕರು ವೃದ್ಧರಾದಿಯಾಗಿ ಭಾಗವಹಿಸುವಿಕೆ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.
  ಅವರು ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಧ್ವಜಾರೋಹಣ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
  ಸಚಿವ ಶಿವರಾಮ ಹೆಬ್ಬಾರ್ ಅವರು ಅನುದಾನ ತಂದು ಅವರ ಪುತ್ರ ವಿವೇಕ ಹೆಬ್ಬಾರ್ ಕಾಳಜಿ ವಹಿಸಿ ಕಾಳಮ್ಮನಗರ ಮೈದಾನ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರುತ್ತಿದೆ. ಆಗ ಬಹಳಷ್ಟು ಕ್ರೀಡೆಗಳಿಗೆ ತರಬೇತಿ ಪಡೆಯಲು ಇಲ್ಲಿ ಅವಕಾಶವಿದೆ. ಮೈದಾನದಲ್ಲಿ ಆಟ ಓಟದಿಂದ ಲವಲವಿಕೆ, ಚೈತನ್ಯ, ಉತ್ಸಾಹ ಇಮ್ಮಡಿಸುತ್ತದೆ, ಹಿಂದೆ ಕೆಲವೊಂದು ಭಾರತೀಯ ಸಾಂಪ್ರದಾಯಿಕ ಕ್ರೀಡೆಗಳಿದ್ದವು. ಇಂದಿನ ಮಕ್ಕಳ-ಯುವಕರ ರುಚಿ ಬೇರೆಯಾಗಿದ್ದು ಅಂತರಾಷ್ಟ್ರೀಯ ಕ್ರೀಡೆಗಳು ಮೈದಾನದಲ್ಲಿ ಕಾಣಿಸುತ್ತಿವೆ. ಕ್ರೀಡೆ ಯಾವುದೇ ಆದರೂ ಕೂಡ ಭಾಗವಹಿಸುವುದು ಮುಖ್ಯ ಹೇಳಿದರು.
  ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಶಾಮಿಲಿ ಪಾರಣಕರ ಮಾತನಾಡಿ, ಪ್ರತಿಯೊಬ್ಬರಿಗೂ ಕ್ರೀಡೆ ಕ್ರೀಡಾಕೂಟ ಅವಶ್ಯವಾಗಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರೀಡೆ ಮಹತ್ವ ಪಡೆಯುತ್ತದೆ. ಜೊತೆಗೆ ಒಳ್ಳೆಯ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶದ ಅವಕಾಶ ಕೂಡ ಸಿಗುತ್ತದೆ. ಮಕ್ಕಳು ಮೊಬೈಲ್ ಆಟಗಳಿಗಿಂತ ಮೈದಾನದ ಆಟಗಳಿಗೆ ಆದ್ಯತೆ ನೀಡಬೇಕು ಎಂದರು.
  ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ವಿ.ಎಂ.ಭಟ್ ಮಾತನಾಡಿ, ಆರ್ಥಿಕವಾಗಿ ಸಾಮಾಜಿಕವಾಗಿ ಸಶಕ್ತರಾದ ಸರ್ಕಾರಿ ನೌಕರಸ್ಥರು ಸಮಾಜಕ್ಕೆ ನಾವು ಏನನ್ನಾದರೂ ಕೊಡಬೇಕು. ಶಾಲೆಯನ್ನು ದತ್ತು ಪಡೆಯುವುದು ಸ್ಮಶಾನವನ್ನು ಸುಂದರವಾಗಿಸುವ ಇಂತಹ ಹಲವು ಶಾಶ್ವತ ಕಾರ್ಯಗಳ ಮೂಲಕ ಸಮಾಜದಲ್ಲಿ ನಾವು ಭಾಗಿಯಾಗಿದ್ದೆವೆ ಎಂದು ತೋರಿಸಬೇಕಾಗಿದೆ. ಕ್ರೀಡಾ ಚಟುವಟಿಕೆ ಮತ್ತು ಹಲವು ಚಟುವಟಿಕೆಗಳ ಮೂಲಕ ಸಂಘಟನೆ ಸಂಘವನ್ನು ಇನ್ನಷ್ಟು ಚುರುಕಿನಿಂದ ಬೆಳೆಸಬಹುದಾಗಿದೆ. ಇಂತಹ ಚಟುವಟಿಕೆಗಳಲ್ಲಿ ಸಂಘದ ಸದಸ್ಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.
  ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ನಾಯ್ಕ ಮಾತನಾಡಿ, ಯಲ್ಲಾಪುರದಲ್ಲಿ ಅತಿದೊಡ್ಡ ಕ್ರೀಡಾಂಗಣವಿದೆ. ಕ್ರೀಡಾಪಟುಗಳು ಪಾಲ್ಗೊಳ್ಳುವಿಕೆ ಕಡಿಮೆ ಕಾಣುತ್ತಿದೆ. ತಾಲೂಕಿನಲ್ಲಿರುವ 900 ಸರ್ಕಾರಿ ನೌಕರರು ಈ ಕ್ರೀಡಾಂಗಣದ ಪ್ರಯೋಜನವನ್ನು ಪಡೆದು ದೈಹಿಕ ಮಾನಸಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
  ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ, ಜಿಲ್ಲಾ ನೌಕರರ ಸಂಘದ ಕಾರ್ಯದರ್ಶಿ ರಮೇಶ್ ನಾಯಕ, ಖಜಾಂಚಿ ಕೃಷ್ಣ ಭಟ್, ತಾಲೂಕ ನೌಕರರ ಸಂಘದ ಗೌರವಾಧ್ಯಕ್ಷ ಜಿ.ಎಂ.ಭಟ್, ಯುವಜನ ಸೇವೆ ಕ್ರೀಡಾಧಿಕಾರಿ ನಾರಾಯಣ ನಾಯಕ, ರಾಜ್ಯ ಪರಿಷತ್ ಇನ್ನಿತರರು ವೇದಿಕೆಯ ಮೇಲಿದ್ದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪ್ರಕಾಶ ನಾಯಕ ಸ್ವಾಗತಿಸಿದರು. ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ನಾಗರತ್ನ ನಾಯಕ ನಿರೂಪಿಸಿದರು. ತಾಲೂಕ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗೋಜನೂರು ವಂದಿಸಿದರು. ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮೇಘ ತಿನೇಕರ ಪ್ರಾರ್ಥಿಸಿದಳು.
  ಪುರುಷ ಸರ್ಕಾರಿ ನೌಕರರಿಗಾಗಿ ಕ್ರಿಕೆಟ್, ಹಗ್ಗ ಜಗ್ಗಾಟ, 100, 200 ಮೀಟರ್ ಓಟ, ಗುಂಡು ಎಸೆತ, ಮಹಿಳಾ ಸರ್ಕಾರಿ ನೌಕರರಿಗಾಗಿ ಸಂಗೀತ ಕುರ್ಚಿ, ಹಗ್ಗ ಜಗ್ಗಾಟ, 100, 200 ಮೀಟರ್ ಓಟ, ಗುಂಡು ಎಸೆತ ಕ್ರೀಡೆಗಳು ನಡೆದವು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top