Slide
Slide
Slide
previous arrow
next arrow

ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಜಿಲ್ಲೆಗೆ ಪ್ರಯೋಜನವಾಗಿಲ್ಲ: ಮುರುಳೀಧರ ಪ್ರಭು

300x250 AD

ಹೊನ್ನಾವರ: ಪಟ್ಟಣದ ಎಸ್‌ಡಿಎಂ ಕಾಲೇಜಿನಲ್ಲಿ ಎರಡು ದಿನಗಳ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳವನ್ನು ಉದ್ಯಮಿ ಮುರುಳೀಧರ ಪ್ರಭು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂದು ಜಾಗತೀಕರಣದ ಮೂಲಕ ಹಲವು ಬದಲಾವಣೆಯನ್ನು ನಾವು ನೋಡಬಹುದು. ಆದರೆ ಬದಲಾವಣೆಗೆ ತಕ್ಕಂತೆ ನಾವು ಸಾಗಬೇಕಿದೆ. ಜಿಲ್ಲೆಯಲ್ಲೀಗ ಅಭಿವೃದ್ಧಿ ನಿಂತ ನೀರಾಗಿದೆ. ಇತ್ತೀಚೆಗೆ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ 10 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬಂದರೂ ಜಿಲ್ಲೆಗೆ ಯಾವುದೇ ಪ್ರಯೋಜನವಾಗಲಿಲ್ಲ. ಪ್ರವಾಸೋದ್ಯಮಕ್ಕೆ ಇರುವ ಉತ್ತಮ ಅವಕಾಶಗಳನ್ನು ಬಳಸಿಕೊಳ್ಳಬೇಕಿದೆ. ಸುಸ್ಥಿರ ಅಭಿವೃದ್ಧಿಗೆ ಮುನ್ನೋಟವಿರುವ ವಾಣಿಜ್ಯೋದ್ಯಮಿಗಳ ಅಗತ್ಯವಿದೆ. ಉದ್ಯಮದ ಪ್ರಾಯೋಗಿಕ ಅನುಭವ ಪಠ್ಯದ ಒಂದು ಭಾಗವಾಗಬೇಕಿದೆ. ಈ ಹಿಂದೆ 500 ವರ್ಷಗಳ ಹಿಂದೆ ರಾಣಿ ಚನ್ನಭೈರಾದೇವಿಯ ಆಳ್ವಿಕೆಯಲ್ಲಿ ಹೊನ್ನಾವರ ಭಟ್ಕಳ ಬಂದರು ಮೂಲಕ ವಿದೇಶದೊಂದಿಗಿನ ಕಾಳುಮೆಣಸಿನ ವಹಿವಾಟು ನಡೆಸುವ ಮೂಲಕ ಜಿಲ್ಲೆಯನ್ನು ಶ್ರೀಮಂತವಾಗಿಸಿದ್ದರು. ಜಿಲ್ಲೆಯ ಪ್ರವಾಸೊದ್ಯಮದಿಂದ ಸಾಕಷ್ಟು ಅಭಿವೃದ್ದಿ ಸಾಧಿಸಬಹುದಾಗಿದ್ದು, ಎಲ್ಲರೂ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದರು.
ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಪೂರ್ವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ‘ಜಾಗತಿಕ ಸುಸ್ಥಿರ ಆರ್ಥಿಕ ಅಭಿವೃದ್ಧಿಯಲ್ಲಿ ವಾಣಿಜ್ಯ ಶಿಕ್ಷಣದ ಪಾತ್ರ’ ಎಂಬ ವಿಷಯದ ಕುರಿತು ಸಂಘಟಿಸಿರುವ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣವನ್ನಾಡಿದ ನಿಟ್ಟೆ ವಿವಿಯ ಉಪ ಕುಲಪತಿ ಡಾ.ಎಂ.ಎಸ್.ಮೂಡಿತಾಯ ಮಾತನಾಡಿ, ಶಿಕ್ಷಣ ಸಂಸ್ಥೆಯಲ್ಲಿ ಬೋಧಿಸುವ ವಿಷಯ ವಾಣಿಜ್ಯೋದ್ಯಮದಲ್ಲಿ ಜಾರಿಗೆ ಬಂದರೆ ಅಭಿವೃದ್ಧಿ ನಿಜ ಅರ್ಥದಲ್ಲಿ ಮೌಲ್ಯಾಧಾರಿತವಾಗುತ್ತದೆ. ಜಾಗತಿಕ ಮುನ್ನೋಟವುಳ್ಳ ಸ್ಥಳೀಯ ಆರ್ಥಿಕತೆಗೆ ಮಹತ್ವ ನೀಡಬೇಕಿದೆ. ಆಂತರಿಕ ಆರ್ಥಿಕ ಸವಾಲುಗಳ ನಡುವೆಯೂ ಭಾರತ ಜಗತ್ತಿನ ಗಮನ ಸೆಳೆದಿದೆ ಎಂದರು.
ನಿಹಾರಿಕಾ ಭಟ್ಟ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ವಿ.ಎಂ.ಭoಡಾರಿ ಸ್ವಾಗತಿಸಿದರು. ದೀಪಾ ನಾಯ್ಕ, ತಸ್ನಿಯಾ ಶೇಖ್ ನಿರೂಪಿಸಿದರು. ಡಾ.ಸುರೇಶ ಎಸ್.ವಂದಿಸಿದರು. ಎಂ.ಪಿ.ಇ ಸೊಸೈಟಿಯ ಉಪಾಧ್ಯಕ್ಷ ನಾಗರಾಜ ಕಾಮತ, ಉಪನ್ಯಾಸಕಿ ಮುಬೀನಾ ಶೇಖ್ ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top