• first
  Slide
  Slide
  previous arrow
  next arrow
 • ಡಿ.12ಕ್ಕೆ ಆರ್.ಎನ್.ಹೆಗಡೆ ಗೋರ್ಸಗದ್ದೆ ಅಭಿನಂದನಾ ಕಾರ್ಯಕ್ರಮ

  300x250 AD

  ಯಲ್ಲಾಪುರ: ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾದ ಆರ್.ಎನ್.ಹೆಗಡೆ ಗೋರ್ಸಗದ್ದೆ ಅವರಿಗೆ ಅವರ ಅಭಿಮಾನಿಗಳಿಂದ ಗೌರವಿಸಿ, ಅಭಿನಂದಿಸಲು ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಎನ್.ಹೆಗಡೆ ಅಭಿನಂದನಾ ಸಮಿತಿಯ ಅಧ್ಯಕ್ಷ ಎಂ.ಜಿ.ಭಟ್ಟ ಸಂಕದಗುAಡಿ ತಿಳಿಸಿದ್ದಾರೆ.
  ಡಿ.12ರಂದು ಮಧ್ಯಾಹ್ನ 3.30ಕ್ಕೆ ತಾಲೂಕಿನ ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆರಂಭಗೊಳ್ಳುವ ಸಮಾರಂಭದ ಕಾರ್ಯಕ್ರಮವನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದು, ಮಾಜಿ ಸಚಿವ ಎಚ್.ಕೆ.ಪಾಟೀಲ ಅಭಿನಂದಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಹಕಾರಿ ಜಿ.ಟಿ.ಹೆಗಡೆ ತಟ್ಟೀಸರ ವಹಿಸುವರು ಎಂದು ತಿಳಿಸಿದ್ದಾರೆ.
  ಅತಿಥಿಗಳಾಗಿ ಪಂಚಾಯತ್‌ರಾಜ್ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಶಿರಸಿಯ ಟಿಎಂಎಸ್ ಅಧ್ಯಕ್ಷ ಜಿ.ಎಂ.ಹೆಗಡೆ ಹುಳಗೋಳ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಶಿರಸಿಯ ಟಿಎಸ್‌ಎಸ್ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಯಲ್ಲಾಪುರ ಟಿಎಂಎಸ್ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ, ಶಿರಸಿಯ ಕೆಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ.ಶೆಟ್ಟಿ ಭಾಗವಹಿಸುವರು. ಆರ್.ಎನ್.ಹೆಗಡೆಯವರ ಕುರಿತಾಗಿ ಸಾಹಿತಿ ಶ್ರೀಧರ ಬಳಗಾರ ಮತ್ತು ರಂಗಕರ್ಮಿ ಆರ್.ಎನ್.ಭಟ್ಟ ಧುಂಡಿ ಅಭಿನಂದನಾ ನುಡಿಗಳನ್ನಾಡುವರು ಎಂದು ತಿಳಿಸಿದರು. ಸಮಾರಂಭದ ಪ್ರಯುಕ್ತ ಸಭಾ ಕಾರ್ಯಕ್ರಮದ ನಂತರ ಪಂಡಿತ್ ಹಾಸಣಗಿ ಗಣಪತಿ ಭಟ್ಟ ಸಂಗಡಿಗರಿAದ ಹಿಂದೂಸ್ಥಾನಿ ಗಾಯನ ಪ್ರಸ್ತುತಗೊಳ್ಳಲಿದೆ ಎಂದು ಎಂ.ಜಿ.ಭಟ್ಟ ತಿಳಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Back to top