ಯಲ್ಲಾಪುರ: ಕೊರೋನಾ ಮೊದಲನೇ ಲಾಕ್‌ಡೌನ್‌ನಲ್ಲಿ ಮೀನು ಮಾರುಕಟ್ಟೆ ಬಂದ್ ಆದಾಗಾ ಹೊರಗಿನ ವ್ಯಾಪಾರಸ್ಥರಿಗೆ ಮನೆ ಮನೆಗೆ ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ ಈಗ ಕೊರೋನಾ ಹೊರಟು ಹೋಗಿದ್ದು, ಮೀನು ಮಾರಾಟಗಾರರು ಪಟ್ಟಣ ಪಂಚಾಯತಿ ನಿಯಮದಂತೆ ನಡೆಯಬೇಕು ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು.
ಪಟ್ಟಣ ಪಂಚಾಯತ ಸಭೆಯಲ್ಲಿ ನಗರದ ಮೀನು ಮಾರುಕಟ್ಟೆಯಲ್ಲಿಯೆ ಮೀನು ಮಾರಬೇಕೆಂದು ಎಲ್ಲ ಸದಸ್ಯರು ಸೇರಿ ಠರಾವು ಮಾಡಲಾಗಿದೆ. ಬುಧವಾರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯಾ ಅವರ ವಿರುದ್ಧ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಆರೋಪ ಮಾಡಿರುವ ಮಹಿಳೆಯಾಗಿರುವ ಕೃತಿಕಾ, ಯಲ್ಲಾಪುರ ಪಟ್ಟಣ ಪಂಚಾಯತ ಮೀನು ಮಾರುಕಟ್ಟೆ ಹರಾಜಿನಲ್ಲಿ ಗೌರಿ ಅಂಬಿಗ ಹೆಸರಿನಲ್ಲಿ ಮೀನು ಮಾರಾಟದ ಕಟ್ಟೆಯನ್ನೂ ಹರಾಜಿನಲ್ಲಿ ಪಡೆದುಕೊಂಡಿದ್ದಾರೆ. ಮಾ.3ರಂದು ಪ್ರತಿ ತಿಂಗಳೂ 1800 ರೂಪಾಯಿ ಬಾಡಿಗೆಯಂತೆ ಪಡೆದುಕೊಂಡಿದ್ದು, ನವೆಂಬರ್‌ವರೆಗೆ 12,744 ರೂ. ಬಾಡಿಗೆ ತುಂಬುವುದು ಬಾಕಿ ಇದೆ. ಅಂಕೋಲಾದಿoದ ಬರುವ ಕೃತಿಕಾ, ಗೌರಿ ಹಾಗೂ ಅವರ ತಾಯಿಗೆ ಪಟ್ಟಣ ಪಂಚಾಯತ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವಂತೆ ಅನೇಕ ಬಾರಿ ತಿಳಿಸಿ ಹೇಳಿದಾಗ ಕೇವಲ ಒಂದು ದಿನ ಮಾತ್ರ ಮೀನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಮತ್ತೆ ಮಂಜುನಾಥನಗರ, ಜೋಡಕೆರೆ, ಕಾಮಾಕ್ಷಿ ಪೆಟ್ರೋಲ್ ಪಂಪ್, ಕುಬೇರ್ ಹೊಟೆಲ್, ಟಿಎಸ್‌ಎಸ್ ಪೆಟ್ರೋಲ್ ಪಂಪ್ ಬಳಿ ಮೀನು ಮಾರಾಟ ಮಾಡುತ್ತಿದ್ದರು. ಮೀನು ಮಾರಾಟದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗುವಂತೆ ಮೀನಿನ ನೀರು, ಕೊಳೆತ ಮೀನುಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದರು. ಈ ಕಾರಣಕ್ಕಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪಟ್ಟಣ ಪಂಚಾಯತದಿ0ದ ಗುರುವಾರ ಹೊಸ ತಂಡವನ್ನು ರಚಿಸಲಾಗಿದ್ದು, ಸ್ಥಳೀಯ ಮೀನು ವ್ಯಾಪಾರಿಗಳಾಗಲಿ ಅಥವಾ ಹೊರಗಿನಿಂದ ಬರುವ ಮೀನು ವ್ಯಾಪಾರಿಗಳಾಲಿ ಮೀನು ಮಾರುಕಟ್ಟೆ ಯಲ್ಲಿಯೆ ಮೀನು ಮಾರಬೇಕು. ಮೀನು ಮಾರುಕಟ್ಟೆ ಹೊರತುಪಡಿಸಿ ಹೊರಗಡೆ ಪ್ರದೇಶದಲ್ಲಿ ಮಾರಿದರೆ ಪಟ್ಟಣ ಪಂಚಾಯತ ಹಾಗೂ ಪೊಲಿಸ್ ಇಲಾಖೆಯ ಸಹಯೊಗದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ.ಪಂ ಉಪಾಧ್ಯಕ್ಷೆ ಶ್ಯಾಮಲಿ ಪಾಟಣಕರ್, ಸದಸ್ಯ ಸತೀಶ ನಾಯ್ಕ ಇದ್ದರು.