Slide
Slide
Slide
previous arrow
next arrow

ಪ್ರಸನ್ನನಾಥ ಸ್ವಾಮೀಜಿಯವರ ವರ್ಧಂತಿ ಆಚರಣೆ

300x250 AD

ಕುಮಟಾ: ಮಿರ್ಜಾನಿನ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹಾಗೂ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಶಾಖಾಮಠದ ಪ್ರಸನ್ನನಾಥ ಸ್ವಾಮೀಜಿಯವರ ವರ್ಧಂತಿ (ಜನ್ಮದಿನ) ಆಚರಿಸಲಾಯಿತು.
ದಿವ್ಯ ಸಾನಿಧ್ಯ ವಹಿಸಿದ್ದ ಮಿರ್ಜಾನ್ ಶಾಖಾಮಠದ ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಾಂಶುಪಾಲರಾದ ಲೀನಾ ಗೊನೇಹಳ್ಳಿಯವರು ಪ್ರಸನ್ನನಾಥ ಸ್ವಾಮೀಯವರ ಬಗ್ಗೆ ಮಾತನಾಡಿದರು. ಹಿರಿಯ ಶಿಕ್ಷಕ ಎಂ.ಜಿ.ಹಿರೇಕುಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾದಶ್ರೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ರಕ್ಷಾ ಮತ್ತು ಸಂಗಡಿಗರು ಭೈರವಾಷ್ಟಕಂ ಪಠಿಸಿದರು. ಪೃಥ್ವಿ ಹಾಗೂ ಸಂಗಡಿಗರು ಭೈರವನ ಕುರಿತು ಗೀತೆಯನ್ನು ಹಾಡಿದರು. ಶುಮೈಲಾ ಮತ್ತು ಸಂಗಡಿಗರು ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಎಂಬ ಸ್ಕಿಟ್ ಪ್ರಸ್ತುತಪಡಿಸಿದರು. ತನುಶ್ರೀ ನಾಯ್ಕ ಕಾರ್ಯಕ್ರಮ ನಿರೂಪಿಸಿದಳು. ಶಿಕ್ಷಕ ರಮೇಶ ನಾಯ್ಕ ಪ್ರಸನ್ನನಾಥ ಸ್ವಾಮೀಯವರ ಜೀವನ ಚರಿತ್ರೆಯ ಬಗ್ಗೆ ಪಿಪಿಟಿ ಮೂಲಕ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಶಿಕ್ಷಕ ಸಂದೀಪ ನಾಯ್ಕ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top