• Slide
    Slide
    Slide
    previous arrow
    next arrow
  • ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಸವಾಲಿನ ನಡುವೆಯೂ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ:ಬಿ.ಎನ್.ವಾಸರೆ

    300x250 AD

    ಕಾರವಾರ: ಜೊಯಿಡಾ ತಾಲೂಕಿನ ಉಳವಿಯಲ್ಲಿ ಡಿ.17 ಮತ್ತು 18ರಂದು 22ನೇ ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ದಟ್ಟಾರಣ್ಯದ ಮಧ್ಯೆ ಇರುವ ಉಳವಿಯಲ್ಲಿ ಸಮ್ಮೇಳನ ಆಯೋಜನೆ ಮಾಡುವುದು ಸವಾಲಾಗಿದ್ದರೂ ಕೂಡ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಹೇಳಿದರು.
    ಇಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡವನ್ನು ಮತ್ತಷ್ಟು ಗಟ್ಟಿಗೊಳಿಸಲು ಗಡಿ ತಾಲೂಕಾದ ಜೊಯಿಡಾದಲ್ಲಿ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಜ್ಞಾನನಿಧಿ ಚೆನ್ನಬಸವಣ್ಣನವರ ವೇದಿಕೆಯಲ್ಲಿ ನಡೆಯುವ ಸಮ್ಮೇಳನವನ್ನು ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಉದ್ಘಾಟಿಸಲಿದ್ದು, ಅಂಕೋಲಾದ ಶಾಂತಾರಾಮ ನಾಯ್ಕ ಹಿಚ್ಕಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ನಾ.ಸು.ಭರತನಳ್ಳಿ, ವಿಜೆ ನಾಯಕ, ಪ್ರಭಾಕರ ರಾಣೆ, ಮಾದೇವ ವೇಪಳಿ, ಡಾ.ವಿಠ್ಠಲ ಭಂಡಾರಿ ದ್ವಾರಗಳಿದ್ದು, ಇವುಗಳನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
    ರಾಷ್ಟ್ರ ಧ್ವಜಾರೋಹಣವನ್ನು ಉಳವಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಲಾ ಮಿರಾಶಿ, ನಾಡ ಧ್ವಜಾರೋಹಣವನ್ನು ಉಪಾಧ್ಯಕ್ಷ ಮಂಜುನಾಥ ಮೊಕಾಶಿ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ತಾವು ನೆರವೇರಿಸುವುದಾಗಿ ತಿಳಿಸಿದರು. ಸಮ್ಮೇಳನದಲ್ಲಿ ಆರು ಗೋಷ್ಠಿಗಳು ನಡೆಯಲಿದ್ದು, ಎರಡು ದಿನವೂ ಊಟ- ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಪುಸ್ತಕ, ವಾಣಿಜ್ಯ ಸೇರಿದಂತೆ ಇತರೆ ಯಾವುದೇ ಮಳಿಗೆ ಇಡುವವರಿಗೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಸಮ್ಮೇಳನ ನಡೆಯುವ ಎರಡು ದಿನವೂ ಜೊಯಿಡಾ ಹಾಗೂ ದಾಂಡೇಲಿಯಿ0ದ ಹೆಚ್ಚುವರಿ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
    ಕಸಾಪ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್, ಪಿ.ಆರ್.ನಾಯ್ಕ, ಮುರ್ತುಜಾ ಹುಸೇನ್, ಕಾರವಾರ ತಾಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ, ಪಾಂಡುರ0ಗ ಪಟಗಾರ ಹಾಗೂ ಬಾಬುಶೇಖ್, ಮಾಧವ ನಾಯಕ, ರಮೇಶ ಗುನಗಿ, ಮಹೇಶ ಗೋಳಿಕಟ್ಟಿ, ಹಿರಿಯ ಪತ್ರಕರ್ತರಾದ ಟಿ.ಬಿ.ಹರಿಕಾಂತ, ಯು.ಎಸ್.ಪಾಟೀಲ ಹಾಗೂ ಇತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top