ಯಲ್ಲಾಪುರ: ಶಿಕ್ಷಣದ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಹಿಂದುಳಿದ ಪ್ರದೇಶದಲ್ಲಿ ಮಕ್ಕಳ ಬಗ್ಗೆ ಪಾಲಕರು ಹೆಚ್ಚಿನ ಕಾಳಜಿ ವಹಿಸಬೇಕು, ಸಾಧ್ಯವಾದಷ್ಟು ಮಕ್ಕಳನ್ನು ಮೊಬೈಲ್‌ನಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಎಂದು ಪಿಎಸ್‌ಐ ಮಂಜುನಾಥ ಗೌಡರ್ ಕರೆ ನೀಡಿದರು.
ಕಿರವತ್ತಿ ಗ್ರಾಮ ಪಂಚಾಯತಿ ವಿಶೇಷ ಗ್ರಾಮ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಕುರಿತು ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಸೈಬರ್ ವಂಚನೆ. ಸೈಬರ್ ತಾಣದ ಮೂಲಕ ಬ್ಲಾಕಮೇಲ್ ಸಹ ಹೆಚ್ಚಾಗಿದೆ. ಆದರಿಂದ ಅಪರಿಚಿತರೊಂದಿಗೆ ಸಂವಾದ ಮಾಡುವಾಗ ಜಾಗೃತರಾಗಬೇಕು. ಸಾಮಾಜಿಕ ಜಾಲತಾಣಗಳನ್ನು ಅಗತ್ಯವಿದ್ದಷ್ಟೇ ಬಳಕೆ ಮಾಡಿಕೊಳ್ಳಬೇಕು. ಎಂದು ಕಿವಿ ಮಾತು ಹೇಳಿದರು.
ಎನ್.ಆರ್.ಎಲ್.ಎಂ ಸಂಜೀವಿನಿ ವಲಯ ಮೇಲ್ವಿಚಾರಕರಾದ ರಾಜಾರಾಮ ವೈದ್ಯ, ಸಮಾನತೆಯ ಅಂಶಗಳು ಸಮಾಜದಲ್ಲಿ ಕಾಣುತ್ತಿವೆ, ಸ್ವಸಹಾಯ ಸಂಘಗಳಿಂದ ಮಹಿಳೆಯರಿಗೆ ಜಾಗೃತಿ ಹೊಂದಲು ಮತ್ತು ಆರ್ಥಿಕ ಅಭಿವೃದ್ಧಿ ಹೊಂದಲು ಪ್ರಮುಖ ಕಾರಣಗಳಾಗಿವೆ ಆದರಿಂದ ಹೆಣ್ಣುಮಕ್ಕಳು ಸ್ವಸಹಾಯ ಸಂಘಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ಕಿರವತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಜಬೀನಾ ಉಸ್ಮಾನ ಪಟೇಲ್, ಉಪಾಧ್ಯಕ್ಷ ರೇಣುಕಾ ಹೋಳಿ ಹಾಗೂ ಸದಸ್ಯರು, ಪಿಡಿಓ ರಮೇಶ ತಿಮ್ಮಾರೆಡ್ಡಿ, ತಾಲೂಕು ಯೋಜನಾ ವ್ಯವಸ್ಥಾಪಕ ಮಂಜಣ್ಣಾ ಬಿ, ಶಾಲಾ ಶಿಕ್ಷಕರು, ಸಾರ್ವಜನಿಕರು, ಮಹಿಳಾ ಸಂಘದ ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.