ಕಾರವಾರ: ನಗರದ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಗರ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿದ್ದ ನಗರ ಠಾಣೆಯ ಇನ್ಸ್ಪೆಕ್ಟರ್ ಸಿದ್ದಪ್ಪ ಬಿಳಗಿ ಮಾತನಾಡಿ, ಆಕಸ್ಮಿಕವಾಗಿ ನಡೆದ ಅಪರಾಧವಾದರೂ ಪರಿಣಾಮ ದೊಡ್ಡದಾಗಿರುತ್ತದೆ. ವಿದ್ಯಾರ್ಥಿಗಳು ವ್ಯಸನಕ್ಕೆ ಗುರಿಯಾದರೆ ಸಾಧನೆ ಮಾಡಲು ಸಾಧ್ಯವಾಗುದಿಲ್ಲ ಎಂದು ನುಡಿದರು.
ಪೊಲೀಸ್ ಸಿಬ್ಬಂದಿ ನೀಲಪ್ಪ ಮಾತನಾಡಿ, ಯುವಜನತೆ ಅಪರಾಧಕ್ಕೆ ಗುರಿಯಾದರೆ ದೇಶಕ್ಕೆ ಮಾರಕ,ಯುವಜನತೆ ಅಪರಾಧ ನಡೆಯುವುದು ಕಂಡು ಬಂದರೆ ಪೋಲಿಸ್ ರಿಗೆ ಸಹಕರಿಸಬೇಕು ಎನ್ನುತ್ತಾ ಅಪರಾಧ ಕಂಡಲ್ಲಿ 112 ಪೊಲೀಸ್ ಸಹಾಯ ವಾಣಿಯ ಉಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ದಿವೇಕರ ಕಾಲೇಜಿನ ದೈಹಿಕ ನಿರ್ದೇಶಕ ಡಾ.ಬಿ.ಆರ್.ತೊಳೆ ಸ್ವಾಗತಿಸಿದರು. ಎಂ.ಕಾಂ. ವಿಭಾಗದ ಮುಖ್ಯಸ್ಥ ಶುಭಂ ತಳೇಕರ ವಂದಿಸಿದರು ರಾಜೇಶ ಮರಾಠಿ ನಿರೂಪಿಸಿದರು ಈ ಸಂದರ್ಭದಲ್ಲಿ ಬಿ.ಸಿ.ಎ ವಿಭಾಗದ ಮುಖ್ಯಸ್ಥ ಡಾ. ಹರೀಶ್ ಕಾಮತ್ ಹಾಗೂ ಉಪನ್ಯಾಸಕ ವರ್ಗ ಉಪಸ್ಥಿತರಿದ್ದರು.