ಭಟ್ಕಳ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಕಲ್ಯಾಣ ಸೇವಾ ಸಮಿತಿಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ತಾಲೂಕಾ ಜಿ.ಎಸ್.ಬಿ ವ್ಯಾಪಾರಸ್ಥರಿಗೆ ವ್ಯಾಪಾರ ಹಾಗೂ ಬಂಡವಾಳ ಹೂಡಿಕೆಯ ಕುರಿತು ವಿಶೇಷ ಶಿಬಿರವನ್ನು ಶ್ರೀಶಾಂತೇರಿ ಕಾಮಾಕ್ಷಿ ಸಭಾಗೃಹದಲ್ಲಿ ನಡೆಯಿತು.
ಹುಬ್ಬಳ್ಳಿಯ ಉದ್ದಿಮೆದಾರ ಆರ್ಕಿಟೆಕ್ಟ್ ಜಿತೇಂದ್ರ ನಾಯಕ, ತಂತ್ರಜ್ಞಾನ ಆಧಾರಿತ ಉದ್ದಿಮೆ- ಆಧುನಿಕ ವ್ಯಾಪಾರದ ಕುರಿತು ಸವಿಸ್ತಾರವಾದ ಮಾಹಿತಿಯನ್ನು ನೀಡಿದರು. ತಾಲೂಕಾ ವ್ಯಾಪಾರಿ ಸಂಘದ ಅಧ್ಯಕ್ಷ ಶ್ರೀಧರ ಶಾನಭಾಗ ಮಾತನಾಡಿ, 21ನೇ ಶತಮಾನದಲ್ಲಿ ಗ್ರಾಮೀಣ ಭಾಗದ ವ್ಯಾಪಾರಸ್ಥರು ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸುತ್ತಾ ವಿವಿಧ ಬಗೆಯ ನೂತನ ಉದ್ದಿಮೆಗಳನ್ನು ಪರಿಚಯಿಸಿದರು.
ತೆರಿಗೆ ಸಲಹಾಗಾರರೂ ಹಾಗೂ ಹಿರಿಯ ವಾಣಿಜ್ಯ ಉಪನ್ಯಾಸಕರಾದ ಮಂಜುನಾಥ ಪ್ರಭು, ಫ್ಯಾಮಿಲಿ ಬ್ಯುಸಿನೆಸ್, ಆದಾಯ ತೆರಿಗೆ, ಜಿಎಸ್‌ಟಿ ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಜಿ.ಎಸ್.ಬಿ ಅಧ್ಯಕ್ಷ ಸುಬ್ರಾಯ ಕಾಮತ, ಮಹಿಳಾ ಸಮಿತಿಯ ಮುಖ್ಯಸ್ಥೆ ನೀತಾ ಕಾಮತ, ಜಿ.ಎಸ್.ಎಸ್ ಅಧ್ಯಕ್ಷ ಕಲ್ಪೇಶ ಪೈ, ಗೌರವಾಧ್ಯಕ್ಷ ನರೇಂದ್ರ ನಾಯಕ, ಪದ್ಮನಾಭ ಪೈ, ಗಣಪತಿ ಪ್ರಭು ಸೇರಿದಂತೆ ಭಟ್ಕಳ- ಶಿರಾಲಿ- ಮುರ್ಡೇಶ್ವರ ಭಾಗದ ನೂರಾರು ವ್ಯಾಪಾರಸ್ಥರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀನಾಥ ಪೈ ಸ್ವಾಗತಿಸಿದರು, ಸಹಕಾರ್ಯದರ್ಶಿ ಗುರುದಾಸ ಪ್ರಭು ಕಾರ್ಯಕ್ರಮ ನಿರೂಪಿಸಿದರು.