• first
  Slide
  Slide
  previous arrow
  next arrow
 • ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

  300x250 AD

  ಅಂಕೋಲಾ: ಶ್ರೀ ನಾರಾಯಣಗುರು ವೇದಿಕೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಮಧಾರಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಪದವಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಪುರಸ್ಕಾರ ನೀಡಲಾಗುವುದು.
  ಅರ್ಜಿ ಸಲ್ಲಿಸುವವರು ಯಾವುದೇ ತಾಲೂಕಿನಲ್ಲಿ ವ್ಯಾಸಂಗ ಮಾಡಿದ್ದರೂ ಅವರ ಆಧಾರ ಕಾರ್ಡ್ ಅಂಕೋಲಾ ವಿಳಾಸದಲ್ಲಿರುವುದು ಕಡ್ಡಾಯ. ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 90, ಪಿ.ಯು.ಸಿ. ಹಾಗೂ ಪದವಿಯಲ್ಲಿ ಶೇ. 80 ಕ್ಕಿಂತ ಅಧಿಕ ಅಂಕ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
  ಅರ್ಜಿದಾರರು ಫೋಟೋ, ಮೊಬೈಲ್ ನಂಬರ್, ಆಧಾರ ಕಾರ್ಡ್, ದೃಢೀಕೃತ ಅಂಕಪಟ್ಟಿಯನ್ನು ‘ನಾಗರಾಜ ಮಂಜಗುಣಿ, ಅಧ್ಯಕ್ಷ, ಶ್ರೀ ನಾರಾಯಣಗುರು ವೇದಿಕೆಯ, ಆಮಂತ್ರಣ ಗ್ರಾಫಿಕ್ಸ್, ಕೆ.ಸಿ. ರಸ್ತೆ, ಅಂಕೋಲಾ, ಮೊ.: 9844384013, ಮಂಜುನಾಥ ಕೆ. ನಾಯ್ಕ, ಕಾರ್ಯದರ್ಶಿ, ಮೊ.: 9901285838 ಗೆ ಡಿಸೆಂಬರ್ 20ರೊಳಗಾಗಿ ಸಲ್ಲಿಸಬಹುದಾಗಿದೆ.

  300x250 AD
  Share This
  300x250 AD
  300x250 AD
  300x250 AD
  Back to top