ಹೊನ್ನಾವರ: ಕಲಿಸುವ ವಿಷಯಕ್ಕೂ, ವಿಷಯ ಪರಿಣಿತಿಗೂ ಸಂಬಂಧವೇ ಇಲ್ಲದ ಶಿಕ್ಷಣ ಕ್ಷೇತ್ರದಲ್ಲಿ ಕಲಾ ಶಿಕ್ಷಕಿಯೊಬ್ಬಳು ಕಲೆಯಲ್ಲೂ ಮೇಲುಗೈ ಸಾಧಿಸಿರುವುದು ಮೆಚ್ಚತಕ್ಕ ಸಂಗತಿ.
ಶ್ರೀಮಂತ ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ಕಲ್ಪನಾ ಪೈ, ಕಲೆಯ ಮೇಲಿನ ಆಸಕ್ತಿಯಿಂದ ಬಾಲ್ಯದಲ್ಲೇ ಕುಂಚ ಹಿಡಿದು ಚಿತ್ರ ಬಿಡಿಸತೊಡಗಿದಳು. ಚಿತ್ರಕಲೆಯನ್ನು ಸಮಗ್ರ ಅಧ್ಯಯನ ಮಾಡಿ ಕ್ಯಾನ್ವಾಸ್, ಗ್ಲಾಸ್, ಪೇಂಟಿಂಗ್ ಸಹಿತ ಎಲ್ಲಾ ಮಾಧ್ಯಮದಲ್ಲಿ ಚಿತ್ರ ಬಿಡಿಸಲು ಆರಂಭಿಸಿದಳು. ಕೈಗೆ ಸಿಕ್ಕ ವಸ್ತುಗಳೆಲ್ಲ ಬಣ್ಣ ಪಡೆದು ಕಲಾಕೃತಿಗಳಾದವು. ಬಿಎಸ್ಸಿ ವಿಜ್ಞಾನ ಓದಿದ್ದರೂ ಕಲೆಯ ಮೇಲಿನ ಪ್ರೀತಿಯಿಂದ ಬೆಂಗಳೂರಿನ ಕೃತಿ ಆರ್ಟ್ ಮತ್ತು ಕ್ರಾಫ್ಟ್ಸ್ ಸಂಸ್ಥೆಯಲ್ಲಿ ಕಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಬೆಂಗಳೂರು ನೂರಾರು ಕಲಾವಿದರಿಗೆ ಆಶ್ರಯ ನೀಡಿದೆ. ಇವರ ಪತಿ ಜಯರಾಮ ಜೀವ ವಿಮಾ ಉದ್ಯೋಗಿಯಾಗಿದ್ದು, ಇಬ್ಬರ ಮಕ್ಕಳನ್ನು ಬೆಳೆಸುತ್ತಾ ಕಲೆಯ ಕಾಯಕವನ್ನು ಮುಂದುವರಿಸುತ್ತಾ ಪ್ರದರ್ಶನಗಳಲ್ಲಿ ಪಾಲ್ಗೊಳ್ಳುತ್ತಾ ರಾಜಧಾನಿಯ ಕಲಾಪ್ರಿಯರ ಮತ್ತು ಕಲಾವಿಮರ್ಶಕರ ಗಮನ ಸೆಳೆದಿದ್ದಾರೆ. ತವರಿನ ಮೇಲಿನ ಪ್ರೀತಿಯಿಂದ ತನ್ನ ಚಿತ್ರಗಳನ್ನು ಸ್ಥಳೀಯ ಪತ್ರಕರ್ತರಿಗೆ ಪರಿಚಯಿಸಿದರು. ಇವರ ಕೃತಿಗಳು ಶ್ರೀಮಂತರ ಮನೆಯ ಗೋಡೆಯ ಅಂದ ಹೆಚ್ಚಿಸಲು ಸೂಕ್ತವಾಗಿದೆ. ಇವರ ಕಲಾಕೃತಿಗಳಲ್ಲಿ ಜೀವಕಳೆ, ಚಲನೆ, ವರ್ಣ ಸಂಯೋಜನೆ ಅರ್ಥಪೂರ್ಣವಾಗಿದೆ. ಇವರನ್ನು ಕಂಡು ಕೃತಿಗಳನ್ನು ಕೊಂಡು ಪ್ರೋತ್ಸಾಹಿಸಬೇಕಾಗಿದೆ. ಇವರ ಮೊ.ಸಂ: 9620548864