ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯತದಲ್ಲಿ ಹಮ್ಮಿಕೊಂಡಿದ್ದ ವಿಕಲಚೇತರ ದಿನಾಚರಣೆ ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ಆಯಮ್ಮ ಗೌಡ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ವಿಕಲಚೇತರಿಗಾಗಿ ಸರಕಾರ ಮಾಸಾಶನ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ಪಿಡಿಓ ನೀಲಕಂಠ ನಾಯಕ, ಸದಸ್ಯರಾದ ಸುಕ್ರು ಗೌಡ, ಸೋಮು ಗೌಡ, ಮಹಾದೇವ ಎಸ್.ಗೌಡ, ಗಣೇಶ ಗೌಡ, ಬುಧವಂತ ಗೌಡ, ಅನಂತ ನಾಯ್ಕ, ಸೋಮಿ ಟಿ.ಗೌಡ, ಮಹಾದೇವಿ ಎ.ಗೌಡ, ನಾಗವೇಣಿ ಜಿ.ಆಗೇರ, ರಂಜನಿ ಆಗೇರ, ಸಂಗೀತಾ ಪಿ.ಗೌಡ, ವಿಕಲಚೇತನ ಕಾರ್ಯಕರ್ತ ದೇವ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಠ್ಠಲ ಬಾಂದಿ ಕಾರ್ಯಕ್ರಮ ನಿರ್ವಹಿಸಿದರು.