Slide
Slide
Slide
previous arrow
next arrow

ಅಂಬೇಡ್ಕರವರನ್ನು ಒಂದೇ ಜಾತಿಗೆ ಸೀಮಿತ ಮಾಡಿರುವುದು ದುರಂತ: ಯಲ್ಲಪ್ಪ ಜೋಗಿಹಳ್ಳಿ

300x250 AD

ಕಾರವಾರ: ಜಗತ್ತಿನ ಮಹಾನಾಯಕ ಸಂವಿಧಾನ ಶಿಲ್ಪಿ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನ ಒಂದೇ ಜಾತಿಗೆ ಸೀಮಿತ ಮಾಡಿರುವುದು ದುರಂತ ಎಂದು ಕಾರವಾರ ಎಲ್.ಐ.ಸಿ ವಿಭಾಗದ ಬ್ರಾಂಚ್ ಮ್ಯಾನೇಜರ್ ಯಲ್ಲಪ್ಪ ಜೋಗಿಹಳ್ಳಿ ಹೇಳಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಅಂಬೇಡ್ಕರ್ ಅವರ ಕೊಡುಗೆ ಕೇವಲ ಒಂದೇ ಸಮುದಾಯಕ್ಕೆ ಅಲ್ಲ. ಎಲ್ಲಾ ಸಮುದಾಯಕ್ಕೂ ಅವರು ಕೊಡುಗೆ ನೀಡಿದ ಮಹಾನ್ ನಾಯಕ ಎಂದರು.
ಅಂಬೇಡ್ಕರ್ ಅವರು ತಮ್ಮ ಅಂತಿಮ ದಿನದಲ್ಲಿ ಸಮಾನತೆ ರಥವನ್ನ ಈ ದಾರಿಯಲ್ಲಿ ತಂದಿದ್ದು ಅದನ್ನ ಮುಂದುವರೆಸಿಕೊ0ಡು ಹೋಗಿ, ಯಾವುದೇ ಕಾರಣಕ್ಕೂ ಹಿಂದೆ ತೆಗೆದುಕೊಂಡು ಹೋಗಬೇಡಿ ಎಂದಿದ್ದರು. ಎಲ್ಲರೂ ಸಮಾನತೆ ಹಾದಿಯಲ್ಲಿ ಸಾಗಬೇಕಾಗಿದೆ ಎಂದರು.
ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆರ್.ಎಂ.ಓ ಡಾ. ವೆಂಕಟೇಶ ಮಾತನಾಡಿ ಅಂಬೇಡ್ಕರ್ ಅವರ ಸಾಧನೆ ಅಪಾರವಾದದ್ದು. ಸಮಾಜದಲ್ಲಿ ಶೋಷಣೆಗೊಳಗಾಗಿ ತನ್ನ ಸಮುದಾಯ ಮುಂದಿನ ಪೀಳಿಗೆಗೆ ಇಂತಹ ನೋವು ಅನುಭವಿಸಬಾರದು ಎಂದು ಹೋರಾಟ ನಡೆಸಿದ ಮಹಾನ್ ನಾಯಕ ಎಂದರು.
ಅಂಬೇಡ್ಕರ್ ಅವರಿಗೆ ಹಿಂದೂ ಧರ್ಮದ ಮೇಲೂ ಅಪಾರ ಗೌರವವಿತ್ತು. ಆದರೆ ಶೋಷಣೆಗಳನ್ನ ವಿರೋಧಿಸಿ ಅಂತಿಮವಾಗಿ ಸಾಮ್ರಾಟ್ ಅಶೋಕ ಹಿಡಿದ ದಾರಿಯಲ್ಲಿ ಬೌದ್ದ ಧರ್ಮವನ್ನ ಸೇರಿದರು. ಅವರ ಆದರ್ಶಗಳನ್ನ ಎಲ್ಲರೂ ಪಾಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾರವಾರ ನಗರಸಭೆ ಪೌರಾಯುಕ್ತ ಆರ್ ಪಿ ನಾಯ್ಕ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಕ್ರಿಮ್ಸ್ ಉಪನ್ಯಾಸಕ ಡಾ. ಹೇಮಗಿರಿ, ಕಾರವಾರ ನಗರ ಠಾಣೆ ಇನ್ಸಪೆಕ್ಟರ್ ಸಿದ್ದಪ್ಪ ಬಿಳಗಿ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದೀಪಕ ಕುಡಾಲಕರ್, ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ನಗರದ ಶಾಸಕರ ಮಾದರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಪುಸ್ತಕಗಳನ್ನ ವಿತರಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top