• first
  Slide
  Slide
  previous arrow
  next arrow
 • ದಲಿತ ರಕ್ಷಣಾ ವೇದಿಕೆಯಿಂದ ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನ ಆಚರಣೆ

  300x250 AD

  ಕಾರವಾರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 66ನೇ ಮಹಾಪರಿನಿರ್ವಾಹಣ ದಿನಾಚರಣೆಯನ್ನ ನಗರದ ಜೀವನ್ ನಗರದಲ್ಲಿ ದಲಿತ ರಕ್ಷಣಾ ವೇದಿಕೆ ವತಿಯಿಂದ ಆಚರಿಸಲಾಯಿತು.
  ಕಾರ್ಯಕ್ರಮದ ಉದ್ಘಾಟನೆ ಮಾಡಿದ ಸ್ಥಳೀಯ ನಗರಸಭಾ ಸದಸ್ಯೆ ರುಕ್ಮಿಣಿ ಗೌಡ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುವೆ ಅಪಾರವಿದೆ. ಶಾಲೆಗಳಲ್ಲಿ ಎಲ್ಲಾ ಮಕ್ಕಳು ಸಮಾನವಾಗಿ ಶಿಕ್ಷಣ ಪಡೆಯುತ್ತಿದ್ದಾರೆ ಎಂದರೇ ಅದಕ್ಕೆ ಅಂಬೇಡ್ಕರ್ ಅವರೇ ಕಾರಣ. ಮಕ್ಕಳು ಅವರ ಆದರ್ಶಗಳನ್ನ ಪಾಲಿಸಬೇಕು ಎಂದರು.
  ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪತ್ರಕರ್ತ ಸಂದೀಪ್ ಸಾಗರ್, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕೊಡುಗೆ ದೇಶಕ್ಕೆ ಅಪಾರವಿದ್ದು, ಇಂದಿಗೂ ಅವರನ್ನ ಎಲ್ಲಾ ವರ್ಗದವರು ನೆನೆಯಬೇಕು ಎಂದರು.
  ಬಾಲ್ಯದಲ್ಲಿಯೇ ಮಹಾರ್ ಜಾತಿಯಲ್ಲಿ ಹುಟ್ಟಿ ಜಾತಿ ಪದ್ದತಿಯ ಕ್ರೂರತೆಯ ಅನುಭವ ಪಡೆದ ಅಂಬೇಡ್ಕರ್ ಮುಂದೆ ಶಿಕ್ಷಣ ಪಡೆದು ಸಂವಿಧಾನ ಬರೆದು ಸಮಾನತೆಗೆ ಕಾರಣವಾದರು. ಸಂವಿಧಾನ ಎಲ್ಲಾ ವರ್ಗ, ಸಮುದಾಯದವರಿಗೂ ಬರೆದದ್ದು ಕೇವಲ ದಲಿತರಿಗಲ್ಲ, ಆದರೆ ಅಂಬೇಡ್ಕರ್ ಅವರನ್ನ ಒಂದೇ ಸಮುದಾಯದ ನಾಯಕ ಎಂದು ಬಿಂಬಿಸಲು ಹೊರಟಿರುವುದು ದುರಂತ ಎಂದರು.
  ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ದೀಪಕ್ ಕುಡಾಲಕರ್ ಮಾತನಾಡಿ ಅಂಬೇಡ್ಕರ್ ಅವರ ಕೊಡುಗೆ ಇಂದು ಮಹಿಳೆಯರು ಶಿಕ್ಷಣ ಪಡೆದು ಎಲ್ಲಾ ಸ್ತರದಲ್ಲಿ ಮುಂದೆ ಬರುತ್ತಿದ್ದಾರೆ. ಎಲ್ಲರೂ ಅವರ ಆದರ್ಶವನ್ನ ಪಾಲಿಸಬೇಕು ಎಂದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ, ದಲಿತರು ಹಿಂದುಳಿದವರು, ಅಲ್ಪಸಂಖ್ಯಾತರು ಎಲ್ಲಾ ವರ್ಗದವರು ಅಂಬೇಡ್ಕರ್ ಅವರನ್ನ ನೆನೆಯಬೇಕು. ಶಿಕ್ಷಣ, ಹೋರಾಟ, ಸಂಘಟನೆ ಅವರು ಸೂಚಿಸಿದ ಅಂಶಗಳು, ಎಲ್ಲರೂ ಶಿಕ್ಷಣ ಪಡೆದು ಸಮುದಾಯದ ಬೆಳವಣಿಗೆಗೆ ದುಡಿಯಬೇಕು. ಅಂಬೇಡ್ಕರ್ ಎನ್ನುವ ವ್ಯಕ್ತಿ ಬರದೇ ಇದ್ದರೇ ಇಂದು ನಾವೆಲ್ಲ ಈ ಸ್ಥಾನದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದರು.
  ಕಾರ್ಯಕ್ರಮದ ನಂತರ ಬಿಣಗಾ ಸೀತಾನಗರದ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್ ಬುಕ್, ಪೆನ್ಸಿಲ್, ರಬ್ಬರ್ ಗಳನ್ನ ವಿತರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಸುಮಂಗಲಾ ಭಂಟ್, ಸುರೇಶ್ ಪೂಜಾರಿ, ಅಕ್ಬರ್ ಇನಾಂದಾರ್, ರಾಘವೇಂದ್ರ ಪೂಜಾರಿ, ಶರದ ಚಲವಾದಿ, ಟೋನಿ ಎಲಕಪಾಟಿ, ರಾಜೇಂದ್ರ ನಾರಾಯಣ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top