• Slide
  Slide
  Slide
  previous arrow
  next arrow
 • ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ವ್ಯಕ್ತಿ

  300x250 AD

  ಕುಮಟಾ: ತಂದೆ- ತಾಯಿಯ ನಿಧನದಿಂದ ಮಾನಸಿಕವಾಗಿ ಕುಗ್ಗಿ ಹೋದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗೋಕರ್ಣದ ಬೆಲೇಹಿತ್ತಲಿನ ಕಡಲತೀರದಲ್ಲಿ ನಡೆದಿದೆ.
  ಮದ್ಗುಣಿ ನಿವಾಸಿ ವಸಂತ ಭಟ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ನಿನ್ನೆ ಸಂಜೆ ಹೊತ್ತಿಗೆ ಅತಿಯಾದ ಮದ್ಯದ ಅಮಲಿನಲ್ಲಿದ್ದ ಇವರು ಕಡಲ ತೀರದಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಪಿಎಸ್‌ಐ ಸುಧಾ ಅಘನಾಶಿನಿ ಅವರು ಇವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾದ ಆಸ್ಪತ್ರೆಗೆ ಸಾಗಿಸಲಾಗಿದೆ.
  ಆತ್ಮಹತ್ಯೆಗೂ ಮುನ್ನ ಡೆಥ್ ನೋಟ್ ಬರೆದಿಟ್ಟ ಇವರು, ತಂದೆ- ತಾಯಿಯ ನಿಧನದ ನಂತರ ಮನನೊಂದು ನಾನು ಕೂಡ ಮರಣವನ್ನು ಸ್ವಾಗತಿಸುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ಸತ್ತ ನಂತರ ಅಪರ ಕಾರ್ಯ ಮಾಡದಂತೆ ಡೆಥ್ ನೋಟ್‌ನಲ್ಲಿ ಮನವಿ ಮಾಡಿದ್ದಾರೆ. ಅದೃಷ್ಟವಶಾತ್ ಇವರು ಬದುಕಿದ್ದು, ಚಿಕಿತ್ಸೆಗೆ ಸ್ಪಂದಿಸಿದ್ದಾರೆ ಎನ್ನಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top