ಹೊನ್ನಾವರ: ಚುನಾವಣೆ ಹೊಸ್ತಿಲಲ್ಲಿ ನಾವಿದ್ದು, ಬೂತ್ ಮಟ್ಟದಿಂದ ಪಕ್ಷದ ಬಲವರ್ಧನೆ ಮಾಡಬೇಕಿದೆ. ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಸಂಘಟಿತರಾಗಿ ಕೆಲಸ ಮಾಡಬೇಕಾಗಿದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು.
ಅವರು ಪಟ್ಟಣದ ಮಂಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮಾಸಿಕ ಸಭೆಯಲ್ಲಿ ಮಾತನಾಡಿದರು. ಕಳೆದ ಅವಧಿಯಲ್ಲಿ ಶಾಸಕನಾಗಿ ಮಾಡಿದ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಿಮ್ಮೆಲ್ಲರ ಪ್ರೀತಿ ನನಗೆ ಶ್ರೀರಕ್ಷೆ, ಈಗಾಗಲೇ ನಾನು ಚುನಾವಣೆಗೆ ತಯಾರಿಲ್ಲಿದ್ದು ನೀವೆಲ್ಲ ನಿಮ್ಮ ನಿಮ್ಮ ಬೂತ್ ವ್ಯಾಪ್ತಿಯಲ್ಲಿ ಸಂಘಟನಾ ಕೆಲಸ ಚುರುಕುಗೊಳಿಸಿ ಹಾಗೂ ನಾನು ನಿಗದಿತ ವೇಳಾಪಟ್ಟಿಯೊಂದಿಗೆ ಎಲ್ಲಾ ಬೂತ್ ಗಳಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಹಾಗೂ ಮುಖಂಡರೊ0ದಿಗೆ ಚರ್ಚಿಸುತ್ತೇನೆ ಎಂದರು.
ಜನಸಾಮಾನ್ಯನಾದ ನನ್ನನ್ನು ಜನನಾಯಕರಾಗಿ ಬೆಳೆಸಿದ ನಿಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ. ನಮ್ಮಲ್ಲಿ ಒಡಕಿಲ್ಲದೆ ಪಕ್ಷದ ಸಿದ್ಧಾಂತ ಅಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರನ್ನು ಸೇರಿಸಿಕೊಂಡು ಮುಂದಿನ ದಿನದಲ್ಲಿ ಪ್ರತಿಯೊಂದು ಚುನಾವಣೆ ಗೆಲ್ಲುವ ವಾತಾವರಣ ನಿರ್ಮಿಸ ಬೇಕಿದೆ. ನಾನು ಗೆದ್ದಾಗ ಸೋತಾಗ ನನ್ನ ಜೊತೆ ನೀವಿದ್ದೀರಿ, ನಾನು ಕೂಡ ನಿಮ್ಮ ಜೊತೆ ಇದ್ದೇನೆ. ಮುಂದು ಕೂಡ ಒಟ್ಟಿಗೆ ಕೆಲಸ ಮಾಡೋಣ ಎಂದರು. ನಾವು ಚುನಾವಣೆ ಎದುರಿಸಲು ಸಿದ್ದರಿದ್ದೇವೆ. ಯಾವ ಭಯವೂ ಇಲ್ಲ. ಈ ಹಿಂದೆ ಸುಳ್ಳು ಹೇಳಿ ಚುನಾವಣೆ ಗೆದ್ದಿದ್ದರು ಈ ಅದು ಯಾವುದು ನಡೆಯುವುದಿಲ್ಲ. ಮತದಾರರು ಬುದ್ದಿವಂತರಿದ್ದಾರೆ ಎಂದರು.
ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವಿಂದ ನಾಯ್ಕ ಮಾತನಾಡಿ ನಾವೆಲ್ಲ ಆತ್ಮವಿಶ್ವಾಸದಿಂದ ಕೆಲಸ ಮಾಡಿ ನಮ್ಮ ನಾಯಕರ ಕೈ ಬಲಪಡಿಸೋಣ ಎಂದರು.
ಸಭೆಯಲ್ಲಿ ಡಿಸಿಸಿ ಸದಸ್ಯರು ಬ್ಲಾಕ್ ಪ್ರತಿನಿಧಿಗಳು ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು, ಸದಸ್ಯರು ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು, ವಿವಿಧ ಸೆಲ್ ಅಧ್ಯಕ್ಷರು ಸದಸ್ಯರು, ಮಹಿಳಾಸೆಲ್ ಮುಖ್ಯಸ್ಥರು ಪ್ರಜಾಪ್ರತಿನಿಧಿ ಅಧ್ಯಕ್ಷರು, ಸದಸ್ಯರು ಭೂತ್ ಸಮಿತಿ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು. ಮಂಕಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ತಾಳಮಕ್ಕಿ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಪ್ರಾರಂಭ ಮಾಡಬೇಕು. ಬೇರೆಯವರ ಅಪಪ್ರಚಾರಕ್ಕೆ ಕಿವಿ ಕೊಡುವುದು ಬೇಡ. ನಿನ್ನೆಯದನ್ನು ಮರೆಯಿರಿ, ಇಂದಿನ ಬಗ್ಗೆ ಯೋಚಿಸಿ.
• ಮಂಕಾಳ ವೈದ್ಯ, ಮಾಜಿ ಶಾಸಕ