ಅಂಕೋಲಾ: ತಾಲೂಕಿನ ಮೇಲಿನ ಮಂಜಗುಣಿಯಲ್ಲಿ 50 ವಿದ್ಯಾರ್ಥಿಗಳಿದ್ದು, ಕಾಯಂ ಇರಬೇಕಿದ್ದ 4 ಶಿಕ್ಷಕರ ಹುದ್ದೆ ಖಾಲಿಯಿದ್ದು, ಒಬ್ಬರು ಅತಿಥಿ ಶಿಕ್ಷಕರು ಮತ್ತು ಇಬ್ಬರನ್ನು ನಿಯೋಜನೆಯ ಮೇಲೆ ಕಳುಹಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗದ0ತೆ ಶಿಕ್ಷಣ ಒದಗಿಸಲು ಶಿಕ್ಷಕರ ನೇಮಕಾತಿಗೆ ಆಧರಿಸಿ ತಹಶೀಲ್ದಾರ ಉದಯ ಕುಂಬಾರ, ಶಿಕ್ಷಣಾಧಿಕಾರಿ ಮಂಗಳ ಲಕ್ಷ್ಮಿ ಪಾಟೀಲ ಅವರಿಗೆ ಮನವಿ ಸಲ್ಲಿಸಿ ಸ್ಥಳೀಯರು ವಿನಂತಿಸಿಕೊ0ಡರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ ವಿ.ನಾಯ್ಕ ಶಾಲೆಯ ಕುಂದು- ಕೊರತೆಗಳ ಬಗ್ಗೆ ಮಾತನಾಡಿ, ಹಳೆಯ ಕಟ್ಟಡ ದುರಸ್ಥಿಗೆ ಆಗ್ರಹಿಸಿದರು. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹೊನ್ನೆಬೈಲ್ ಗ್ರಾ.ಪಂ. ಅಧ್ಯಕ್ಷ ಮಾದೇವ ಗುನಗಾ, ಸದಸ್ಯ ವೆಂಕಟ್ರಮಣ ಕೆ. ನಾಯ್ಕ, ಸ್ಥಳೀಯರಾದ ಶ್ರೀಪಾದ ಟಿ. ನಾಯ್ಕ, ನಾಗರಾಜ ಮಂಜಗುಣಿ ಉಪಸ್ಥಿತರಿದ್ದರು.