Slide
Slide
Slide
previous arrow
next arrow

ಉಪವಿಭಾಗಾಧಿಕಾರಿಯಾಗಿ ಪದೋನ್ನತಿ ಹೊಂದಿದ ಉದಯ ಕುಂಬಾರಗೆ ಸನ್ಮಾನ

300x250 AD

ಅಂಕೋಲಾ: ತಹಸೀಲ್ದಾರರಾಗಿ ಉತ್ತಮ ಕಾರ್ಯನಿರ್ವಹಿಸಿದ ಉದಯ ಕುಂಬಾರ್ ಅವರು ಉಪವಿಭಾಗಾಧಿಕಾರಿಯಾಗಿ ಪದೋನ್ನತಿ ಹೊಂದಿ, ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಅವರನ್ನು ಶನಿವಾರ ಮಂಜಗುಣಿ- ಹೊನ್ನೆಬೈಲ್ ಗ್ರಾಮದ ನಾಗರಿಕರು ಸನ್ಮಾನಿಸಿ ಗೌರವಿಸಿದರು.
ಹೊನ್ನೆಬೈಲ್ ಗ್ರಾ.ಪಂ. ಅಧ್ಯಕ್ಷ ಮಾದೇವ ಗುನಗಾ ಮಾತನಾಡಿ, ಯಾವುದೇ ಸಮಸ್ಯೆಗಳಿದ್ದರೂ ತಹಸೀಲ್ದಾರ್ ಉದಯ ಕುಂಬಾರ ಅವರು ತಕ್ಷಣ ಅದನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತಿದ್ದರು. ಅಂತಹ ಅಧಿಕಾರಿಗಳು ನಮ್ಮ ತಾಲೂಕಿಗೆ ಅಗತ್ಯವಿದೆ ಎಂದರು.
ಪ್ರಮುಖರಾದ ಶ್ರೀಪಾದ ನಾಯ್ಕ ಮಂಜಗುಣಿ ಮಾತನಾಡಿ, ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿಯೂ ಕೂಡ ಶಕ್ತಿ ಮೀರಿ ಕೆಲಸ-ಕಾರ್ಯಗಳನ್ನು ಮಾಡಿದ್ದಾರೆ. ಯಾರೇ ಕಚೇರಿಗೆ ಬಂದರೂ ತಕ್ಷಣ ಅವರ ಕೆಲಸವನ್ನು ಮಾಡಿಕೊಡುತ್ತಿದ್ದರು. ಇವರು ಪದೋನ್ನತಿ ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಗೌರವ ಸ್ವೀಕರಿಸಿದ ತಹಸೀಲ್ದಾರ್ ಉದಯ ಕುಂಬಾರ ಮಾತನಾಡಿ, ನಾನು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದರೆ ಅದು ಪ್ರತಿಯೊಬ್ಬರು ಕೈಜೋಡಿಸಿದ್ದರು. ಜನರ ಪ್ರೀತಿ-ವಿಶ್ವಾಸವಿಲ್ಲದೇ ಯಾವ ಕೆಲಸಗಳು ಯಶಸ್ವಿಯಾಗುವುದಿಲ್ಲ ಎಂದರು.
ಗ್ರಾ.ಪ0. ಸದಸ್ಯ ವೆಂಕಟ್ರಮಣ ಕೆ. ನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂತೋಷ ವಿ. ನಾಯ್ಕ, ಪತ್ರಕರ್ತ ನಾಗರಾಜ ಮಂಜಗುಣಿ, ನಿವೃತ್ತ ಶಿರಸ್ತೇದಾರ, ಎನ್.ಎಂ. ಗುನಗಾ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top