Slide
Slide
Slide
previous arrow
next arrow

ಮತದಾರರ ಪಟ್ಟಿ ಪರಿಷ್ಕರಣೆಗೆ ಬೂತ್ ಏಜೆಂಟ್‌ಗಳಿಗೆ ವಿಶೇಷ ಜವಾಬ್ದಾರಿ: ಎಸಿ ವಿಜಯಲಕ್ಷ್ಮೀ

300x250 AD

ಹಳಿಯಾಳ: ವಿಧಾನಸಭಾ ಚುನಾವಣೆ ಸಮಿಪಿಸುತ್ತಿರುವುದರಿಂದ ಮತದಾರರ ಪಟ್ಟಿಯ ಪರಿಷ್ಕರಣೆಯ ವಿಶೇಷ ಅಭಿಯಾನ ನಡೆಯಲಿದೆ. ಬೂತ್ ಮಟ್ಟದಲ್ಲಿ ಏಜೆಂಟ್‌ಗಳಿಗೆ ವಿಶೇಷ ಜವಾಬ್ದಾರಿ ನೀಡುವ ಮೂಲಕ ಮತದಾರರ ಯಾದಿಯತ್ತ ಗಮನಹರಿಸುವಂತೆ ನೊಡಿಕೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ವಿಜಯಲಕ್ಷ್ಮೀ ರಾಯಕೊಡ ತಿಳಿಸಿದರು.
2023ರ ಚುನಾವಣೆಯ ಪರಿಷ್ಕೃತ ಕರಡು ಮತದಾರರ ಪಟ್ಟಿ ಅಂತಿಮಗೊಳಿಸುವ ಕುರಿತು ಸಭೆ ನಡೆಸಿದ ಅವರು, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಿಡಿಪಿಓಗಳಿಗೆ ವಿಶೇಷ ಜವಾಬ್ದಾರಿಯನ್ನು ನೀಡಲಾಗಿದೆ ಎಂದರು. ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಇಚ್ಛಿಸುವ ಅರ್ಹ ಯುವಕ- ಯುವತಿಯರಿಗೆ ಮೊದಲ ಆದ್ಯತೆಯ ಮೇರೆಗೆ, ನಿಯಮಾವಳಿಗಳ ಅನುಸಾರ ಮತದಾರರ ಯಾದಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕು ಮತ್ತು ಮತದಾರರ ವಿಳಾಸ ತಿದ್ದುಪಡಿ ಮಾಡಲು ಡಿಸೆಂಬರ್ 8ರವರೆಗೆ ಅವಕಾಶವಿದೆ ಎಂದು ತಿಳಿಸಿದರು.
ನಮೂನೆ 6ರಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಿಸಲು ಬಯಸುವವರು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ 7ರಲ್ಲಿ ಇತ್ತಿಚಿಗೆ ಮರಣ ಹೊಂದಿದ ಮತದಾರರ ಹೆಸರನ್ನು ಖಚಿತಪಡಿಸಿಕೊಂಡು ಪಟ್ಟಿಯಿಂದ ತೆಗೆಯಲಾಗುವುದೆಂದರು.
ಸಭೆಯಲ್ಲಿ ತಹಶೀಲ್ದಾರ್ ಆರ್.ವಿ.ಕಟ್ಟಿ, ದಾಂಡೇಲಿ ತಹಶೀಲ್ದಾರ್ ಶೈಲೇಶ್ ಪರಮಾನಂದ, ಗ್ರೇಡ್ 2 ತಹಶಿಲ್ದಾರ್ ಜಿ.ಕೆ.ರತ್ನಾಕರ್, ಬಿಜೆಪಿಯ ಯಲ್ಲಪ್ಪ ಹೊನ್ನೋಜಿ, ಕಾಂಗ್ರೆಸ್‌ನ ಸತ್ಯಜಿತ್ ಗಿರಿ, ಸದಾನಂದ ದಬಗಾರ್ ಇತರ ಪ್ರಮುಖರು ಇದ್ದರು.

300x250 AD
Share This
300x250 AD
300x250 AD
300x250 AD
Back to top