• Slide
  Slide
  Slide
  previous arrow
  next arrow
 • ಯುವಕರು ವಿಷ ವರ್ತುಲದಲ್ಲಿ ಬಂಧಿ: ಕಾಗೇರಿ

  300x250 AD

  ಶಿರಸಿ: ಇಂದಿನ ಯುವಕರು ವಿಷ ವರ್ತುಲದಲ್ಲಿ ಬಂಧಿಯಾಗಿರುವುದರಿ0ದ ಸ್ವೇಚಾಚ್ಛಾರದ ಬದುಕು ಕಾಣುತ್ತಿದ್ದಾರೆ. ಯುವಕರು ಸ್ವಯಂ ಪ್ರೇರಿತರಾಗಿ ಬದುಕು ರೂಪಿಸಿಕೊಳ್ಳದಿದ್ದರೆ ಇಡೀ ದೇಶ ಅವನತಿಯ ಹಾದಿಗೆ ಸಾಗಲಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಳವಳ ವ್ಯಕ್ತಪಡಿಸಿದರು.
  ಅವರು ಸರಕಾರಿ ಪದವಿ ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್, ಡಿಜಿಟಲ್ ಲೈಬ್ರರಿ, ಎಲೆಎಮ್‌ಎಸ್ ಮತ್ತು ಕಾರ್ಯಗಾರವನ್ನು ಉದ್ಘಾಟಸಿ ಮಾತನಾಡಿದರು. ಯುವಕರು ಪ್ರಜಾಪ್ರಭುತ್ವ ಸಂಸದೀಯ ವ್ಯವಸ್ಥೆಯ ಕಾವಲುಗಾರರಾಗಬೇಕು. ಅದಿಲ್ಲವಾದರೆ ಬದುಕು ಕಟ್ಟಿಕೊಳ್ಳುವುದು ಕಷ್ಟ. ನಮ್ಮಲ್ಲಿ ಮಾನವ ಶಕ್ತಿಯಿದೆ. ಆದರೆ ಅದರ ಪ್ರಯೋಜನ ದೇಶಕ್ಕೆ ಆಗುತ್ತಿಲ್ಲ. ನಮ್ಮಲ್ಲಿ ಸಾಕಷ್ಟು ಅಕ್ಷರಸ್ಥರಿದ್ದಾರೆ. ಆದರೆ ವಿಚ್ಚೇದನ, ಅನಾಥಾಶ್ರಮಗಳ ಸಂಖ್ಯ ಹೆಚ್ಚಾಗುತ್ತಿದೆ. ನಮಗೆ ದೇಶವೇ ಮುಖ್ಯವಾಗಬೇಕು. ಆದರೆ ನಾವು ದೇಶದಲ್ಲಿ ಜಾತಿ ತಾರತಮ್ಯ, ಮತೀಯ ಭಾವನೆ, ಮೇಲು ಕೀಲು ಇಂತಹ ಬೇಡವಾದ ವಿಚಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದೇವೆ. ದೇಶವೇ ಇಲ್ಲದಿದ್ದರೆ ನಾವು ಎನೂ ಮಾಡಲು ಸಾಧ್ಯವಿಲ್ಲವೆಂದರು.
  ಕೆಲವರು ಮತದಾನದ ವಯಸ್ಸನ್ನು 18ರ ಬದಲಾಗಿ 16ಕ್ಕೆ ಇಳಿಸಬೇಕೆಂದು ಸಲಹೆ ನೀಡಿದ್ದಾರೆ. ಇದು ಸರಿಯಾದ ಸೂಚನೆ ಇರಬಹುದಾದರೂ ಮೊದಲು ಮತದಾನದ ಹಕ್ಕಿರುವವರು ಎಷ್ಟರ ಮಟ್ಟಿಗೆ ಪ್ರಜಾವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನುವುದರ ಬಗ್ಗೆ ಒಮ್ಮೆ ಚಿಂತನೆ ನಡೆಸಬೇಕು. ನಾವೀಗ ಸವಾಲುಗಳ ಸರಮಾಲೆಯಲ್ಲಿದ್ದೇವೆ. ನಾವು ದೇಶ ಸೇವೆಗೆ ಸಕ್ರಿಯವಾಗಿ ಪಾಲ್ಗೊಳ್ಳದಿದ್ದರೆ ಇಡೀ ದೇಶವೇ ಅಭಿವೃದ್ಧಿ ಹೀನವಾಗಲಿದೆ ಎಂದರು.
  ಸರಕಾರಿ ಪದವಿ ಕಾಲೇಜಿಗೆ ಇದುವರೆಗೂ 15 ಕೋಟಿ ರೂ. ನೀಡಿದ್ದೇನೆ. ಈ ಕಾಲೇಜಿನ ಅಭಿವೃದ್ಧಿಗೆ ಯಾವುದೂ ಕಡಿಮೆ ಮಾಡಲಿಲ್ಲ. ಈ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯಿAದ ಇಡೀ ರಾಜ್ಯದ ಗಮನ ಸೆಳೆದಿದೆ. ಸದ್ಯದ ಪರಿಸ್ಥಿತಿಯಲ್ಲಿ 2700 ಮಕ್ಕಳು 70ಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ಕಾಲೇಜಿನ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಲು 23 ಲಕ್ಷ ರೂ. ಬಿಡುಗಡೆ ಮಾಡಿ ಕಾಮಗಾರಿಗಾಗಿ ಭೂಮಿಪೂಜೆ ಕೂಡಾ ಮಾಡಲಾಗಿದೆ ಎಂದರು.
  ಸಭೆಯಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ಕುಳವೆ ಗ್ರಾ.ಪಂ ಅಧ್ಯಕ್ಷ ವಿನಯ ಭಟ್ಟ, ಸದಸ್ಯರಾದ ಗಂಗಾಧರ ನಾಯ್ಕ, ಕುಮಟಾದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಕಾಲೇಜಿನ ಮುಖ್ಯ ಗ್ರಂಥಪಾಲಕ ಶಿವಾನಂದ ಬುಲ್ಲಾ, ಕಾಲೇಜಿನ ಪ್ರಾಂಶುಪಾಲರಾದ ಡಾ.ದಾಕ್ಷಾಯಣಿ ಹೆಗಡೆ ಮತ್ತಿತರರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top