Slide
Slide
Slide
previous arrow
next arrow

ಸ್ವತಂತ್ರವಾಗಿ ಕಾರ್ಯಕ್ರಮ ಆಯೋಜನೆಯನ್ನೇ ಸವಾಲಾಗಿ ಸ್ವೀಕರಿಸಿ: ಸುರೇಶ್ಚಂದ್ರ ಕೆಶಿನ್ಮನೆ

300x250 AD

ಯಲ್ಲಾಪುರ: ಸಾಂಸ್ಕೃತಿಕ ಚಟುವಟಿಕೆ ನಡೆಸುವ ಆಸಕ್ತ ಸಂಘಟಕರು ಯಾವುದೇ ರಾಜಕೀಯ ನೆರವು ಅಪೇಕ್ಷಿಸದೇ, ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನೇ ಸವಾಲಾಗಿ ಸ್ವೀಕರಿಸಿದರೆ ಮಾತ್ರ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹೇಳಿದರು.
ಅವರು ತಾಲೂಕಿನ ಮಂಚಿಕೇರಿಯ ಸಮಾಜ ಮಂದಿರದಲ್ಲಿ ಹಾಸಣಗಿ ಸೇವಾ ಸಹಕಾರಿ ಸಂಘ ಮತ್ತು ಮಂಚಿಕೇರಿಯ ಶ್ರೀ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಸಹಕಾರದೊಂದಿಗೆ ಮಂಚಿಕೇರಿಯ ರಂಗ ಸಮೂಹ ಹಮ್ಮಿಕೊಂಡ 3 ದಿನಗಳ ಸಂಸ್ಕೃತಿ ಉತ್ಸವ ಉದ್ಘಾಟಿಸಿ, ಮಾತನಾಡುತ್ತಿದ್ದರು.
ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸಾಂಸ್ಕೃತಿಕ ಕ್ಷೇತ್ರ ದಿಂದ ದೋರಕುವ ದೂರಗಾಮಿ ಫಲ ಅತ್ಯಮೂಲ್ಯ. ಮಾನಸಿಕ ನೆಮ್ಮದಿಗೆ, ಹಣಕ್ಕೆ ದೊರೆಯದ, ಅನಪೇಕ್ಷಿತ ಗೀಳುಗಳಿಂದ ಪಾರು ಮಾಡಲು ಕಲೆ ಖಂಡಿತ ಸಹಕಾರಿ ಎಂದರು.
ರಂಗ ಸಮೂಹದ ಅಧ್ಯಕ್ಷ ಆರ್.ಎನ್.ಧುಂಡಿ ಮಾತನಾಡಿ, ಸಮಾಜದ ನಡುವೆ ಬಿರುಕು ಬಿಡುತ್ತಿರುವ ಸಂಬ0ಧಗಳನ್ನು ಪುನಃ ಬೆಸೆಯಲು ಇಂತಹ ನಾಟಕೋತ್ಸವಗಳು ಖಂಡಿತ ಸಹಾಯಕಾರಿ ಎಂದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಬಗೆಗೆ ಅಸಡ್ಡೆ ಹೊಂದಿರುವ ಸರ್ಕಾರ, ನಮ್ಮ ಕ್ರಿಯಾಶೀಲ ಕಾರ್ಯಕ್ರಮಗಳಿಗೆ ಅಗತ್ಯವಿರುವ ನೆರವು ನೀಡುತ್ತಿಲ್ಲ, ಉತ್ತಮ ಕಾರ್ಯಕ್ರಮಗಳು ನಿಲ್ಲಬಾರದೆಂಬ ಹಠದಿಂದ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದರು.
ರ0ಗಸಮೂಹದ ಪ್ರಮುಖರಾದ ಜಿ.ಎನ್.ಶಾಸ್ತ್ರಿ, ರಾಘವೇಂದ್ರ ಭಟ್ಟ ಹಾಸಣಗಿ, ಎಂ ಜಿ.ಭಟ್ಟ ಬೊಮ್ನಳ್ಳಿ, ಆರ್.ಜಿ.ಹೆಗಡೆ ಬೆದೆಹಕ್ಕಲು ವೇದಿಕೆಯಲ್ಲಿದ್ದರು. ಆರ್.ಎನ್.ಧುಂಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಂ.ಕೆ.ಭಟ್ಟ ಯಡಳ್ಳಿ ನಿರ್ವಹಿಸಿ, ವಂದಿಸಿದರು. ನಂತರ ಉತ್ಸವದ ಪ್ರಯುಕ್ತ ವೇದಿಕೆಯಲ್ಲಿ ಹೆಗ್ಗೋಡಿನ ನೀನಾಸಂ ತಿರುಗಾಟ ತಂಡದವರು ಬಿ.ಆರ್.ವೆಂಕಟರಮಣ ಐತಾಳ ನಿರ್ದೇಶನದಲ್ಲಿ, ಮಾಧವ ಚಿಪ್ಪಳಿ ಕನ್ನಡಕ್ಕೆ ರೂಪಾಂತರಿಸಿದ `ಇಫಿಜೀನಿಯಾ ನಾಟಕವನ್ನು ಪ್ರದರ್ಶಿಸಿದರು.

300x250 AD
Share This
300x250 AD
300x250 AD
300x250 AD
Back to top