ಅಂಕೋಲಾ: ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನದ ಅನುಭವಕ್ಕಾಗಿ ಸರಕಾರ ಆಹಾರ ಮೇಳದಂತಹ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳುತ್ತಿದೆ. ಇವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗೇರುವಂತಾಗಲಿ ಎಂದು ಹೊನ್ನೆಬೈಲ್ ಗ್ರಾ.ಪಂ. ಅಧ್ಯಕ್ಷ ಮಾದೇವ ಗುನಗಾ ಹೇಳಿದರು.
ತಾಲೂಕಿನ ಮಂಜಗುಣಿಯ ಶ್ರೀ ಗುರುದಾಸ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಮಕ್ಕಳ ಆಹಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ವೈವಿಧ್ಯಮಯ ಕಾರ್ಯಕ್ರಮಗಳಿಗೆ ನಮ್ಮ ಪಂಚಾಯಿತಿಯಿಂದ ಸದಾ ಬೆಂಬಲವಿದೆ ಎಂದರು.
ಪ್ರಮುಖರಾದ ಪಾಂಡುರಂಗ ಗೌಡ ಮಾತನಾಡಿ, ಇಲ್ಲಿಯ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದ್ದು, ಪ್ರತಿಯೊಬ್ಬರೂ ಉತ್ತಮವಾಗಿ ಪಾಠ ಮಾಡುತ್ತಿದ್ದಾರೆ. ಅದರಂತೆ ವಿದ್ಯಾರ್ಥಿಗಳು ಕೂಡ ಉತ್ತಮವಾದ ಅಂಕ ಪಡೆಯಲು ಸಾಧ್ಯವಾಗಿದೆ ಎಂದರು.
ಮುಖ್ಯಾಧ್ಯಾಪಕ ಎಂ.ಡಿ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಧುರೀಣ ರಾಮಚಂದ್ರ ತಾಂಡೇಲ ಆಹಾರ ಮೇಳ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಹಳೆಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾಗರಾಜ ಎಂ., ಗ್ರಾ.ಪಂ. ಉಪಾಧ್ಯಕ್ಷೆ ಬೇಬಿ ತಾಂಡೇಲ, ಪಿ.ಡಿ.ಓ. ಹಸ್ಮತ್ ಖಾನ್, ಕಾರ್ಯದರ್ಶಿ ಗಣಪತಿ ನಾಯ್ಕ, ಶಿಕ್ಷಕರಾದ ಸಚಿನ ನಾಯಕ, ದೀಪಾ ನಾಯಕ, ಭಾಸ್ಕರ ನಾಯ್ಕ, ಅರುಣಕುಮಾರ ನಾಯ್ಕ, ಸಿಬ್ಬಂದಿ ರಾಜೇಶ ಬಾನಾವಳಿಕರ ಉಪಸ್ಥಿತರಿದ್ದರು. ಶಿಕ್ಷಕರಾದ ಚಂದ್ರಕಾಂತ ಲಮಾಣಿ ಸ್ವಾಗತಿಸಿದರು. ಚಂದ್ರಶೇಖರ ನಾಯ್ಕ ನಿರ್ವಹಿಸಿದರು. ಐ.ಎಸ್. ನಾಯ್ಕ ವಂದಿಸಿದರು.