Slide
Slide
Slide
previous arrow
next arrow

ಹಳೆದಾಂಡೇಲಿಯಲ್ಲಿ ಸಂಭ್ರಮದಿಂದ ನಡೆದ ಗ್ಯಾರ್ವಿ ಶರೀಫ್ ಹಬ್ಬ

300x250 AD

ದಾಂಡೇಲಿ: ನಗರದ ಹಳೆದಾಂಡೇಲಿಯ ಮೆಹಬೂಬು ಸುಬಾನಿ ಮಸೀದಿಯ ಮುಂಭಾಗದಲ್ಲಿ ಸ್ಥಳೀಯ ಸುಲ್ತಾನ್ ಬಾಯ್ಸ್ ಕಮೀಟಿ ವತಿಯಿಂದ ಗ್ಯಾರ್ವಿ ಶರೀಪ್ ಹಬ್ಬ ಕಾರ್ಯಕ್ರಮವನ್ನು ಸಂಭ್ರಮ, ಸಡಗರದಿಂದ ಹಮ್ಮಿಕೊಳ್ಳಲಾಯಿತು.
ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಥಳೀಯ ಮಸೀದಿಯ ಮೌಲಾನಾ ಅವರು ಶುಭ ಪ್ರಾರ್ಥಿಸಿ ಗ್ಯಾರ್ವಿ ಹಬ್ಬದ ಮಹತ್ವವನ್ನು ವಿವರಿಸಿದರು. ಇನ್ನೋರ್ವ ಮುಖ್ಯ ಅತಿಥಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉಸ್ಮಾನ್ ಮುನ್ನಾ ವಹಾಬ್ ಅವರು ಭಾಗವಹಿಸಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇಂತಹ ಕಾರ್ಯಕ್ರಮಗಳು ಊರಿನಲ್ಲಿ ಶಾಂತಿ, ಸೌಹಾರ್ಧತೆಯನ್ನು ಮೇಳೈಸುವಲ್ಲಿ ಪರಿಣಾಮಕಾರಿಯಾಗಿದೆ ಎಂದರು. ಕರ‍್ಯಕ್ರಮದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಧರ್ಮ ಬಾಂಧವರು ಭಾಗವಹಿಸಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಸುಲ್ತಾನ್ ಬಾಯ್ಸ್ ಕಮೀಟಿಯ ಅಧ್ಯಕ್ಷರಾದ ಮಾಬುಲಿ ಬನ್ನೂರು ಮತ್ತು ಕಮೀಟಿಯ ಪದಾಧಿಕಾರಿಗಳಾದ ಶೈಬಾಜ್ ಧಪೇದಾರ, ಮಹಮ್ಮದ್ ಸ್ವಾಲಿಯಾ ಶೇಖ, ಸಮದ್, ಇಬ್ರಾಹಿಂ, ಖಲೀಲ್ ಹಾಗೂ ಕಮೀಟಿಯ ಸದಸ್ಯರು ಶ್ರಮಿಸಿದ್ದರು.

300x250 AD
Share This
300x250 AD
300x250 AD
300x250 AD
Back to top