Slide
Slide
Slide
previous arrow
next arrow

ಮೊಸಳೆಯ ದಾಳಿಗೊಳಗಾಗಿದ್ದ ಆಕಳಿನ ರಕ್ಷಣೆ

300x250 AD

ದಾಂಡೇಲಿ: ನಗರದ ಹಳೆದಾಂಡೇಲಿಯಲ್ಲಿ ನೀರು ಕುಡಿಯಲೆಂದು ಕಾಳಿ ನದಿಗಿಳಿದಿದ್ದ ಆಕಳೊಂದರ ಮೇಲೆ ಮೊಸಳೆಯೊಂದು ದಾಳಿ ನಡೆಸಿ, ಇನ್ನೇನು ಎಳೆದೊಯ್ದುಕೊಂಡು ಹೋಗುವಷ್ಟರಲ್ಲಿ ಸ್ಥಳೀಯರ ಸಮಯೋಚಿತ ಕಾರ್ಯ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಪ್ರಯತ್ನದಿಂದ ಮೊಸಳೆಯ ಬಾಯಿಯಿಂದ ಆಕಳನ್ನು ರಕ್ಷಿಸಿದ ಘಟನೆ ನಡೆದಿದೆ.
ಹಳೆದಾಂಡೇಲಿಯ ಸದಾನಂದ ನಾಯ್ಕ ಅವರ ಮನೆ ಹಿಂಭಾಗದಲ್ಲಿರುವ ಕಾಳಿ ನದಿಗೆ ನೀರು ಕುಡಿಯಲೆಂದು ಆಕಳೊಂದು ಇಳಿದಿತ್ತು. ಅಲ್ಲೆ ಇದ್ದ ಮೊಸಳೆ ಆಕಳಿನ ಮೇಲೆ ದಾಳಿ ನಡೆಸಿ, ಎಳೆದೊಯ್ಯಲು ಪ್ರಯತ್ನಿಸಿದೆ. ಕೂಡಲೆ ಸ್ಥಳೀಯರಾದ ಗಣಪತಿ ನಾಯ್ಕ, ಸೂರಜ್ ನಾಯ್ಕ, ಅಕ್ಬರ್, ರಾಘವೇಂದ್ರ ನಾಯ್ಕ ಮೊದಲಾದವರು ಸೇರಿ ಬೊಬ್ಬೆ ಹೊಡೆದು ತಕ್ಕ ಮಟ್ಟಿಗೆ ರಕ್ಷಿಸಿದ್ದಾರೆ. ಕೂಡಲೆ ಸ್ಥಳಕ್ಕಾಗಮಿಸಿದ ಅರಣ್ಯ ರಕ್ಷಕ ನಾರಾಯಣ ಜುಂಜುವಾಡಕರ ಅವರ ನೇತೃತ್ವದಲ್ಲಿ ಹಗ್ಗದ ಸಹಾಯದಿಂದ ಆಕಳನ್ನು ಮೇಲಕ್ಕೆ ಎಳೆೆಯಲಾಯಿತು. ಕಾಲಿಗೆ ಗಂಭೀರ ಗಾಯಗೊಂಡ ಹಿನ್ನಲೆಯಲ್ಲಿ ನಗರದ ಪಶುವೈದ್ಯ ಆಸ್ಪತ್ರೆಯ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಚಿಕಿತ್ಸೆ ನೀಡಲಾಯಿತು.

300x250 AD
Share This
300x250 AD
300x250 AD
300x250 AD
Back to top