ಸಿದ್ದಾಪುರ: ತಾಲೂಕಿನ ವಿವಿಧ ದೇವಾಲಯಗಳ ಅಭಿವೃದ್ದಿ, ಜೀರ್ಣೋದ್ಧಾರಕ್ಕಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರ ವಿಶೇಷ ಪ್ರಯತ್ನದಿಂದ ಹಾಗೂ ಶಿಫಾರಸ್ಸಿನ ಮೇರೆಗೆ ಒಟ್ಟು ರೂ.85 ಲಕ್ಷಗಳ ಅನುದಾನ ಮಂಜೂರಿಯಾಗಿದೆ.
2022-23ನೇ ಸಾಲಿನ ದೇವಸ್ಥಾನಗಳ ಅಭಿವೃದ್ಧಿ, ಜೀರ್ಣೋದ್ಧಾರಕ್ಕಾಗಿ ತಾಲೂಕಿನ 9 ದೇವಸ್ಥಾನಗಳಿಗೆ ಈ ಅನುದಾನವನ್ನು ಮಂಜೂರಿ ಮಾಡಿಸಿದ್ದಾರೆ. ತಾಲೂಕಿನ ಬಿದ್ರಕಾನ ಪಂಚಾಯತ ಕವಲಕೊಪ್ಪದ ಶ್ರೀ ವಿನಾಯಕ ದೇವಸ್ಥಾನಕ್ಕೆ ರೂ.10 ಲಕ್ಷ, ಅಣಲೇಬೈಲ ಗ್ರಾಮ ಪಂಚಾಯತ ಮೂರೂರಿನ ಶ್ರೀ ಕಲ್ಲೇಶ್ವರ ದೇವಸ್ಥಾನಕ್ಕೆ ರೂ.10 ಲಕ್ಷ, ಹಾರ್ಸಿಕಟ್ಟಾ ಗ್ರಾಮ ಪಂಚಾಯತ ಶ್ಯಾನಬಾಳಗದ್ದೆಯ ಶ್ರೀ ಶನೇಶ್ವರ ದೇವಸ್ಥಾನಕ್ಕೆ ರೂ.10 ಲಕ್ಷ, ನೀಲ್ಕುಂದ ಗ್ರಾಮ ಪಂಚಾಯತ ದೇವಿಮನೆಯ ಶ್ರೀ ದುರ್ಗಾದೇವಿ ದೇವಸ್ಥಾನಕ್ಕೆ ರೂ.5 ಲಕ್ಷ, ಸಿದ್ದಾಪುರ ಪಟ್ಟಣದ ಹೊಸೂರಿನ ಶ್ರೀ ಬಂಕೇಶ್ವರ ದೇವಸ್ಥಾನಕ್ಕೆ ರೂ.25 ಲಕ್ಷ, ಶಿರಳಗಿ ಗ್ರಾಮ ಪಂಚಾಯತ ಶಿರಳಗಿಯ ಶ್ರೀ ಹನುಮಂತ ದೇವಸ್ಥಾನಕ್ಕೆ ರೂ.5 ಲಕ್ಷ, ಸಿದ್ದಾಪುರ ಪಟ್ಟಣ ಹಾಳದಕಟ್ಟಾದ ಶ್ರೀ ಗಣಪತಿ ದೇವಸ್ಥಾನಕ್ಕೆ ರೂ.10 ಲಕ್ಷ, ಹಾರ್ಸಿಕಟ್ಟಾ ಗ್ರಾಮ ಪಂಚಾಯತ ಹಳಿಯಾಳ(ಮುಠ್ಠಳ್ಳಿ)ದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನಕ್ಕೆ ರೂ.5 ಲಕ್ಷ, ಹಸ್ರಗೋಡ ಗ್ರಾಮ ಪಂಚಾಯತ ಕೋಡ್ಸರದ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ರೂ.5 ಲಕ್ಷ, ಈ ಮೇಲಿನ ದೇವಸ್ಥಾನಗಳಿಗೆ ಅನುದಾನ ಮಂಜೂರಿ ಮಾಡಿಸಿದ್ದಾರೆ.
ಅಭಿನಂದನೆ: ತಾಲೂಕಿನ ದೇವಾಲಯಗಳ ಅಭಿವೃದ್ದಿ, ಜೀರ್ಣೋದ್ದಾರಕ್ಕಾಗಿ ಅನುದಾನ ಮಂಜೂರಿ ಮಾಡಿಸಿ ಅನುಕೂಲ ಮಾಡಿಕೊಟ್ಟಿರುವ ಅಭಿವೃದ್ಧಿಯ ಹರಿಕಾರರು, ನಮ್ಮ ನೆಚ್ಚಿನ ಜನಪ್ರೀಯ ಶಾಸಕರು ಹಾಗೂ ಹೆಮ್ಮೆಯ ಗೌರವಾನ್ವಿತ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ತಾಲೂಕಿನ ಜನತೆಯ ಪರವಾಗಿ, ಭಾರತೀಯ ಜನತಾ ಪಕ್ಷದ ಪರವಾಗಿ ಹೃತ್ಪೂರ್ವಕ ಅಭಿನಂಧನೆಗಳನ್ನು ಸಲ್ಲಿಸುತ್ತೇನೆ ಎಂದು ಬಿಜೆಪಿಯ ಮಂಡಲ ಅಧ್ಯಕ್ಷ ಮಾರುತಿ ಟಿ.ನಾಯ್ಕ ತಿಳಿಸಿದ್ದಾರೆ.