ಕಾರವಾರ: ಜನ- ದನಗಳ ಸೇವೆಯಲ್ಲಿ ಮುಂಚೂಣಿಯಲ್ಲಿರುವ ನಗರದ ಉದ್ಯಮಿ ಅನಮೋಲ್ ರೇವಣಕರ್ ಅವರು 50ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡೆಂಘೀ ರೋಗಿಯೊಬ್ಬರಿಗೆ ‘ಓ’ ಪಾಸಿಟವ್ ಪ್ಲೇಟ್‌ಲೆಟ್‌ಗಳ ಅವಶ್ಯಕವಿರುವುದಾಗಿ ವೈದ್ಯರು ತಿಳಿಸಿದ್ದು, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಈ ಬಗ್ಗೆ ಅನಮೋಲ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ತಕ್ಷಣವೇ ಆಸ್ಪತ್ರೆಗೆ ಧಾವಿಸಿ ರಕ್ತ ನೀಡುವ ಮೂಲಕ ರೋಗಿಯ ಚಿಕಿತ್ಸೆಗೆ ಅವರು ಸ್ಪಂದಿಸಿದ್ದಾರೆ.
ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವ ಅನಮೋಲ್ ಅವರು ಗೋಪ್ರೇಮಿ ಹಾಗೂ ಗೋರಕ್ಷಕರೂ ಆಗಿದ್ದಾರೆ. ರೆಡ್‌ಕ್ರಾಸ್‌ನ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಅನಮೋಲ್ ಅವರ ಇಂಥ ಸಾಮಾಜಿಕ ಕಾರ್ಯಗಳು ಹೀಗೆ ಮುಂದುವರಿಯಲಿ ಎಂದು ಜನಶಕ್ತಿ ವೇದಿಕೆ ಹಾಗೂ ನಗರದ ಸಮಾನ ಮನಸ್ಕ ಸಂಘಟನೆಗಳು ಆಶಿಸಿ ಅಭಿನಂದಿಸಿವೆ.