Slide
Slide
Slide
previous arrow
next arrow

ಡಿಸಿ ಕಚೇರಿ ಬಳಿ ಅಂಬೇಡ್ಕರರ ಪ್ರತಿಮೆ ಸ್ಥಾಪನೆ; ಮಾಧವ ನಾಯಕ ಹರ್ಷ

300x250 AD

ಕಾರವಾರ: ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಲು ಮುಂದಾಗಿರುವುದು ಸ್ವಾಗತಾರ್ಹ ಹಾಗೂ ಅಭಿನಂದನಾರ್ಹ ಬೆಳವಣಿಗೆ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ತಿಳಿಸಿದ್ದಾರೆ.
ಅಂಬೇಡ್ಕರ್ ಅವರು ಯಾವುದೇ ಒಂದು ಧರ್ಮ, ಜಾತಿಗೆ ಸೀಮಿತವಾದವರಲ್ಲ. ಮಹಾನ್ ಮಾನವತಾವಾದಿಯಾಗಿದ್ದ ಅವರು ಸಕಲರಿಗೂ ಸಮಾಜದಲ್ಲಿ ಸಮಾನ ಅವಕಾಶ ಸಿಗಬೇಕೆಂದು ಇಚ್ಛಿಸಿ, ಸಂವಿಧಾನದ ಮೂಲಕ ಆ ಅವಕಾಶಗಳನ್ನ ಜಾರಿಗೊಳಿಸಿದವರು. ಅಂಥವರ ಪ್ರತಿಮೆ ಕೇವಲ ಜಿಲ್ಲಾ ಕೇಂದ್ರದಲ್ಲಷ್ಟೇ ಅಲ್ಲ, ಪ್ರತಿ ತಾಲೂಕುಗಳಲ್ಲೂ ಇರುವಂತಾಗಬೇಕು ಎಂದು ಅವರು ಆಶಿಸಿದ್ದಾರೆ.
ನಗರದಲ್ಲಿ ಮಹಾತ್ಮ ಗಾಂಧಿ, ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಪ್ರತಿಮೆ ಇದ್ದು, ಅಂಬೇಡ್ಕರರ ಪ್ರತಿಮೆ ಇಲ್ಲದ ಬಗ್ಗೆ ಈ ಹಿಂದೆ ಕೃಷ್ಣಯ್ಯ ಜಿಲ್ಲಾಧಿಕಾರಿಗಳಿದ್ದಾಗ ಮನವಿ ಸಲ್ಲಿಸಿ, ನಗರದಲ್ಲೂ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದೆ. ಬಹಳ ವಿಳಂಬವಾಗಿಯಾದರೂ, ಈಗಲಾದರೂ ಅವರ ಪ್ರತಿಮೆ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ. ಅಂಬೇಡ್ಕರರ ಪ್ರತಿಮೆ ಸ್ಥಾಪಿಸಬೇಕೆಂದು ಪ್ರಯತ್ನಿಸಿದ ಎಲ್ಲರಿಗೂ, ಪ್ರತಿಮೆ ಸ್ಥಾಪನಗೆ ಅನುದಾನ ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೂ ಅಭಿನಂದನೆ ಸಲ್ಲಿಸುವೆ ಎಂದು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top