ಸಿದ್ದಾಪುರ: ತಾಲೂಕಿನ ಬೆಳಸಲಿಗೆ ಯಕ್ಷಗಾನ ಪ್ರತಿಷ್ಠಾನದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕವಲಕೊಪ್ಪ ವಿನಾಯಕ ದೇವಾಲಯದ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ದಶಮಾನೋತ್ಸವ ಸಂಭ್ರಮ ಯಕ್ಷಗಾನ, ಸನ್ಮಾನ ಕಾರ್ಯಕ್ರಮದೊಂದಿಗೆ ಸಂಪನ್ನಗೊ0ಡಿತು.
ಉಪನ್ಯಾಸಕ ಹಾಗೂ ಯಕ್ಷಗಾನ ಕಲಾವಿದ ವಿ.ದತ್ತಮೂರ್ತಿ ಭಟ್ಟ ಶಿವಮೊಗ್ಗ ಸಮಾರೋಪ ಮಾತನಾಡಿದರು. ಟಿಎಸ್‌ಎಸ್‌ನ ಮಾಜಿ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ದೇವಸ್ಥಾನದ ಅಧ್ಯಕ್ಷ ಎಂ.ಎಸ್.ಹೆಗಡೆ ಕವಲಕೊಪ್ಪ, ಯಕ್ಷಗಾನ ಕಲಾವಿದರಾದ ನಿರ್ಮಲಾ ಗೊಳಿಕೊಪ್ಪ, ನಾಗರಾಜ ಮಧ್ಯಸ್ಥ, ಗೋಳಿಕುಂಬ್ರಿಮ ಪ್ರತಿಷ್ಠಾನದ ಸುರೇಶ ಹೆಗಡೆ, ಗೀತಾ ಹೆಗಡೆ ಇತರರಿದ್ದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಭಾಗವತ ಗಿರೀಶ ಹೆಗಡೆ ಗೊದ್ಲಬೀಳ ಅವರನ್ನು ಸನ್ಮಾನಿಸಲಾಯಿತು. ನಂತರ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ, ಶಂಕರ ಭಾಗವತ್ ಯಲ್ಲಾಪುರ, ಲಕ್ಷ್ಮಿನಾರಾಯಣ ಸಂಪ ಸಹಕರಿಸಿದರು. ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಅಶೋಕ ಭಟ್ಟ ಸಿದ್ದಾಪುರ, ಗಣಪತಿ ಹೆಗಡೆ ತೋಟಿಮನೆ, ವಿ.ದತ್ತಮೂರ್ತಿ ಭಟ್ಟ, ಶ್ರೀಧರ ಹೆಗಡೆ ಚಪ್ಪರಮನೆ, ವೆಂಕಟೇಶ ಹೆಗಡೆ ಓಜಗಾರ, ಅವಿನಾಶ ಕೊಪ್ಪ ಹಾಗೂ ನಾಗಶ್ರೀ ಬೆಂಗಳೂರು ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು. ಸಂತೋಷ ಹೆಗಡೆ, ಕಾತ್ಯಾಯನಿ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.