Slide
Slide
Slide
previous arrow
next arrow

ನೇರಗೋಡಿನಲ್ಲಿ ವಾಲಿಮೋಕ್ಷ ತಾಳಮದ್ದಲೆ

300x250 AD

ಸಿದ್ದಾಪುರ: ದೊಡ್ಮನೆ ಶ್ರೀಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾ ಸಂಘ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ತಾಲೂಕಿನ ನೇರಗೋಡಿನ ಬಯಲು ರಂಗಮ0ದಿರದಲ್ಲಿ ಅಣ್ಣಪ್ಪ ಮರಾಠಿ ಇವರ ಸಹಕಾರದೊಂದಿಗೆ ವಾಲಿಮೋಕ್ಷವೆಂಬ ಪೌರಾಣಿಕ ಕಥಾಭಾಗವನ್ನು ಪ್ರದರ್ಶಿಸಲಾಯಿತು.
ಹಿಮ್ಮೇಳದಲ್ಲಿ ಗಣಪತಿ ಭಾಗವತ್ ಉಳ್ಳುರಮಠ, ನಾಗರಾಜ ಭಂಡಾರಿ ಹಿರೆಬೈಲು, ರಾಮನ್ ಹೆಗಡೆ ಉರಕೇರಿ ಇವರುಗಳು ಉತ್ತಮವಾಗಿ ಸಾತ್ ನೀಡಿದರು. ಮುಮ್ಮೇಳದಲ್ಲಿ ವಾಲಿಯ ಪಾತ್ರದಲ್ಲಿ ಶ್ರೀಧರ ಭಟ್ ಗಡಿಹಿತ್ಲು, ಸುಗ್ರೀವ ಪಾತ್ರದಲ್ಲಿ ತಿಮ್ಮಪ್ಪ ಭಟ್ ಸಾರಂಗ ದೊಡ್ಮನೆ, ಶ್ರೀರಾಮನ ಪಾತ್ರದಲ್ಲಿ ಟಿ.ಎ.ಹೆಗಡೆ ಬಾನಬ್ಬಿ ಮತ್ತು ವಿನಾಯಕ ಮರಾಠಿ ನಿರಗೋಡ, ತಾರೆಯ ಪಾತ್ರದಲ್ಲಿ ಶಂಕರನಾರಾಯಣ ಹೆಗಡೆ ದಾನಮಾಂವ, ಹನುಮಂತನ ಪಾತ್ರದಲ್ಲಿ ಕೇಶವ ಹೆಗಡೆ ಕಿಬ್ಳೆ ಇವರುಗಳು ಪಾತ್ರ ನಿರ್ವಹಿಸಿದರು. ವಿನಾಯಕ ಮರಾಠಿ ಸ್ವಾಗತಿಸಿದರು. ಕೇಶವ ಹೆಗಡೆ ಎಲ್ಲರನ್ನು ಅಭಿನಂದಿಸಿದರು.

300x250 AD
Share This
300x250 AD
300x250 AD
300x250 AD
Back to top