• Slide
  Slide
  Slide
  previous arrow
  next arrow
 • ಕ್ರೀಡಾಕೂಟ: ಅರಣ್ಯ ವೀಕ್ಷಕ ಗಣೇಶ ರಾಷ್ಟ್ರ ಮಟ್ಟಕ್ಕೆ ಆಯ್ಕೆ

  300x250 AD

  ಹೊನ್ನಾವರ: ಚಿಕ್ಕನಕೋಡ್ ಗ್ರಾಮದ ಗಣೇಶ ಎಸ್.ನಾಯ್ಕ ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಅರಣ್ಯ ಇಲಾಖೆಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
  ಅರಣ್ಯ ಇಲಾಖೆಯ ನೌಕರರಿಗಾಗಿ ನ.23 ರಿಂದ 25ರವರೆಗೆ ನಡೆದ ಈ ಕ್ರೀಡಾಕೂಟ ನಡೆದಿತ್ತು. ಇದರಲ್ಲಿ ಹಿರಿಯರ ವಿಭಾಗದ 800 ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 400 ಮೀ. ಓಟದಲ್ಲಿ ತೃತೀಯ ಹಾಗೂ 400 ಮೀ. ರೀಲೆಯಲ್ಲಿಯೂ ಸಹ ದ್ವಿತೀಯ ಸ್ಥಾನ ಗಳಿಸುವುದರ ಮೂಲಕ ಗಣೇಶ ಸಾಧನೆ ತೋರಿದ್ದಾರೆ.
  ತಾಲೂಕಿನ ಗುಂಡಬಾಳ ವ್ಯಾಪ್ತಿಯಲ್ಲಿ ಅರಣ್ಯ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಕ್ರೀಡೆ, ಯಕ್ಷಗಾನ ಸೇರಿದಂತೆ ಹಲವು ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಅಭಿನಂದಿಸಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top