ಕುಮಟಾ: ನ್ಯೂಜಿಲೆಂಡ್‌ನಲ್ಲಿ ನಡೆದ ಕಾಮನ್‌ವೆಲ್ತ್ ಪ್ರೆಸ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಪವರ್ ಲಿಫ್ಟಿಂಗ್‌ನ 93 ಕೆಜಿ ವಿಭಾಗದಲ್ಲಿ ಇಲ್ಲಿನ ವೆಂಕಟೇಶ ಪ್ರಭು ಚಿನ್ನದ ಪದಕ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ವೆಂಕಟೇಶ ಪ್ರಭು ಅವರು ಇಲ್ಲಿನ ವ್ಯಾಯಾಮ ಶಾಲೆಯ ವಿದ್ಯಾರ್ಥಿಯಾಗಿದ್ದು, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ್ದರು. ಇದೀಗ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಅಲ್ಲಿಯೂ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ.
ಇವರ ಸಾಧನೆಗೆ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಯುವ ಮುಖಂಡ ರವಿಕುಮಾರ ಶೆಟ್ಟಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗಜಾನನ ಪೈ, ಶಿವಾನಂದ ಹೆಗಡೆ ಕಡತೋಕಾ, ಮುಖಂಡರಾದ ವಿನೋದ ಪ್ರಭು, ರತ್ನಾಕರ ನಾಯ್ಕ, ಎಂ.ಎA.ಹೆಗಡೆ ಹೊಲನಗದ್ದೆ, ಹೇಮಂತಕುಮಾರ ಗಾಂವಕರ, ಪ್ರದೀಪ ನಾಯಕ ದೇವರಬಾವಿ, ಭಾಸ್ಕರ ಪಟಗಾರ, ವಿ.ಎಲ್.ನಾಯ್ಕ ಸೇರಿದಂತೆ ತಾಲೂಕಿನ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾಮನ್‌ವೆಲ್ತ್ ನಲ್ಲಿ ವೆಂಕಟೇಶ ಪ್ರಭುಗೆ ಚಿನ್ನ
